ಬೇಕಾಗುವ ಸಾಮಗ್ರಿಗಳು:
ಸಾಬುದಾನ
ನೀರು
ಜೀರಿಗೆ
ಹಸಿಮೆಣಸಿನಕಾಯಿ ಪೇಸ್ಟ್
ಉಪ್ಪು
ನಿಂಬೆ ರಸ
ಮಾಡುವ ವಿಧಾನ
ಸಾಬುದಾನವನ್ನು ಚೆನ್ನಾಗಿ ತೊಳೆದು, ನೀರು ಹಾಕಿ 4-5 ಗಂಟೆಗಳ ಕಾಲ ನೆನೆಯಿಡಿ. ಒಂದು ದಪ್ಪ ತಳದ ಪಾತ್ರೆಯಲ್ಲಿ 4-5 ಕಪ್ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿ ಬಂದಾಗ ನೆನೆಸಿದ ಸಾಬುದಾನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಸಾಬುದಾನ ಮೃದುವಾಗುವವರೆಗೆ ಸಣ್ಣ ಉರಿಯಲ್ಲಿ ಕೈಯಾಡಿಸಿ. ಬೆಂದ ನಂತರ ಗ್ಯಾಸ್ ಆಫ್ ಮಾಡಿ ಜೀರಿಗೆ, ಹಸಿಮೆಣಸಿನಕಾಯಿ ಪೇಸ್ಟ್ ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ತಣ್ಣಗಾಗಲು ಬಿಡಿ. ಒಂದು ಪ್ಲಾಸ್ಟಿಕ್ ಶೀಟ್ ಮೇಲೆ ಎಣ್ಣೆ ಸವರಿ, ಚಮಚದಿಂದ ಸಣ್ಣ ಸಣ್ಣ ವೃತ್ತಾಕಾರದಲ್ಲಿ ಹಿಟ್ಟನ್ನು ಹರಡಿ. 2 ದಿನಗಳ ಕಾಲ ಗಟ್ಟಿಯಾಗುವವರೆಗೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಚೆನ್ನಾಗಿ ಒಣಗಿದ ಹಪ್ಪಳವನ್ನು ಕಾಯ್ದ ಎಣ್ಣೆಯಲ್ಲಿ ಹಾಕಿದರೆ ಗರಿಗರಿಯಾದ ಸಾಬುದಾನ ಪಾಪಡ್ ರೆಡಿ!



