October 16, 2026
Friday, October 16, 2026
spot_img

ಈಗಷ್ಟೇ ಉದ್ಘಾಟನೆಯಾಗಿದ್ದ ಸಿದ್ದರಾಮಯ್ಯ ಸೇತುವೆ ಬಳಿ ಈಜಲು ಹೋಗಿದ್ದ ವ್ಯಕ್ತಿ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ಎನ್‌ಆರ್‌ಪುರದ ಸಿದ್ದರಾಮಯ್ಯ ಸೇತುವೆ ಬಳಿ ಈಜಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ.

ಸಿದ್ದರಾಮಯ್ಯ ಸೇತುವೆ ಕೆಳಭಾಗದ ಭದ್ರಾ ನದಿಯ ಹಿನ್ನೀರಿನಲ್ಲಿ ಎನ್.ಆರ್.ಪುರದ ಸಿಗುವಾನಿ ಗ್ರಾಮದ ಮೂವರು ಯುವಕರು ಈಜಲು ತೆರಳಿದ್ದರು. ಮೂವರಲ್ಲಿ ಒಬ್ಬರು ನಾಪತ್ತೆಯಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ರಕ್ಷಣಾ ತಂಡಗಳು, ಅಗ್ನಿಶಾಮಕದಳ ಸಿಬ್ಬಂದಿ, ಸ್ಥಳೀಯರು ಹಾಗೂ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ.

Must Read