ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನ ಮಾಜಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ವಿದಾಯ ಸಮಾರಂಭ ಭಾವನಾತ್ಮಕ ವಾತಾವರಣದಲ್ಲಿ ನಡೆಯಿತು. ದೇಶದ ಪ್ರಮುಖ ರಾಜಕೀಯ, ಧಾರ್ಮಿಕ ನಾಯಕರು ಹಾಗೂ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು.
ನಾಯಕರ ಭಾವುಕ ವಿದಾಯ
ಅಂತಿಮ ದರ್ಶನದ ವೇಳೆ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್, ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ, ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಸೇರಿದಂತೆ ಹಲವು ಗಣ್ಯರು ಕಣ್ಣೀರಿಟ್ಟ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:
ಕಟ್ಟೆಚ್ಚರದ ಭದ್ರತೆ
ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಟೆಹ್ರಾನ್‌ನಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರು ನಿಗದಿತ ಸಮಯದಲ್ಲಿ ಮಾತ್ರ ಪ್ರವೇಶಿಸುವಂತೆ ಆಡಳಿತ ಸೂಚನೆ ನೀಡಿದ್ದು, ಮೆರವಣಿಗೆ ಮಾರ್ಗಗಳಲ್ಲಿ ವಿಶೇಷ ಭದ್ರತೆ ಜಾರಿಗೊಳಿಸಲಾಯಿತು.
ಭಾರತೀಯ ನಿಯೋಗವೂ ಭಾಗಿ
ಖಮೇನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಾರತದ ಪ್ರತಿನಿಧಿ ಮಂಡಳಿಯೂ ಭೇಟಿ ನೀಡಿತು. ಈ ವೇಳೆ ವಿವಿಧ ರಾಜಕೀಯ ನಾಯಕರು ಹಾಗೂ ವಿದೇಶಿ ಪ್ರತಿನಿಧಿಗಳು ಶ್ರದ್ಧಾಂಜಲಿ ಸಲ್ಲಿಸಿ ಗೌರವ ಅರ್ಪಿಸಿದರು.



