October 10, 2026
Saturday, October 10, 2026
spot_img

ಅಮ್ಮನಿಗೆ 80 ಕೋಟಿ ಮೌಲ್ಯದ ಮನೆ ಕೊಟ್ಟು ಕಣ್ಮುಚ್ಚಿದ ನಟ, ಮಗ ಆಡಿಬೆಳೆದ ಗುಡಿಸಲೇ ಸಾಕು ಎಂದ ತಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿರಾತಕ, ಶಿವಾಜಿಗರ ಹಾಗೂ ತಮಿಳು ಸಿನಿಮಾಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನಟ ಡೇನಿಯಲ್‌ ಬಾಲಾಜಿ ನಿಧನರಾಗಿದ್ದಾರೆ. ತಮ್ಮ ತಾಯಿಗೆ ಎಂಬತ್ತು ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಯನ್ನು ನೀಡಿದ ಡೇನಿಯಲ್‌ ಕಾಣದ ಲೋಕಕ್ಕೆ ಹೋಗಿದ್ದಾರೆ.

ಬರೀ 48ನೇ ವಯಸ್ಸಿಗೆ ಹೃದಯಾಘಾತದಿಂದ ಡೇನಿಯಲ್‌ ನಿಧನರಾಗಿದ್ದಾರೆ. ನಿಧನಕ್ಕೆ ಇಡೀ ತಮಿಳು ಹಾಗೂ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ.

ತಾಯಿ ರಾಜಲಕ್ಷ್ಮಿಗೆಂದು ಡೇನಿಯಲ್‌ ಬೃಹತ್‌ ಬಂಗಲೆಯನ್ನು ಬಿಟ್ಟು ಹೋಗಿದ್ದಾರೆ. ಮಗ ಬಿಟ್ಟುಹೋದ ಮನೆಯಲ್ಲಿ ಅವರ ಆಸೆಯಂತೆ ತಾಯಿ ವಾಸವಿದ್ದರು. ಆದರೆ ಮಗನ ಪ್ರತಿಯೊಂದು ವಸ್ತು, ನೆನಪು ಅವರನ್ನು ಕಾಡುತ್ತಿದೆ. ಇದಕ್ಕಿಂತ ನನ್ನ ಕಂದ ಆಡಿ ಬೆಳೆದ ಗುಡಿಸಲೇ ಸರಿ ಎಂದು ರಾಜಲಕ್ಷ್ಮಿ ಊರು ಬಿಟ್ಟಿದ್ದಾರೆ.

ಚೆನ್ನೈನ ಆವಡಿಯಲ್ಲಿ ಕಟ್ಟಿಸಿದ್ದ ದೇವಸ್ಥಾನದ ಬಳಿಯ ಪುಟ್ಟ ಗುಡಿಸಿಲಿನಲ್ಲಿ ರಾಜಲಕ್ಷ್ಮಿ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇದನ್ನು ಕಂಡು ಜನ ಮರುಗಿದ್ದಾರೆ. ತಾಯಿಯ ಹೃದಯವೇ ಅಂಥದ್ದು ಎಂದು ಕಣ್ಣೀರಿಟ್ಟಿದ್ದಾರೆ.

Must Read