October 10, 2026
Saturday, October 10, 2026
spot_img

CINE | ನಟಿ ಮೃಣಾಲ್‌ ಠಾಕೂರ್‌ಗೆ ಬಾಲಿವುಡ್‌ನಿಂದ ಬೇಸರವಾಗಿದ್ಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಮೃಣಾಲ್‌ ಠಾಕೂರ್‌ಗೆ ಬಾಲಿವುಡ್‌ನಿಂದ ಬೇಸರವಾಗಿದ್ಯಂತೆ! ಹೌದು, ಸನ್‌ ಆಫ್‌ ಸರ್ದಾರ್‌ ಟೀಂನಿಂದ ಮೃಣಾಲ್‌ ಬೇಸರದಲ್ಲಿದ್ದಾರೆ. ಇಡೀ ಬಾಲಿವುಡ್‌ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಮೃಣಾಲ್‌ ಪತಿಯ ಪಾತ್ರದಲ್ಲಿ ಹಿರಿಯ ನಟ ಚಂಕಿ ಪಾಂಡೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಆರಂಭಕ್ಕೂ ಮುನ್ನ ತನ್ನ ಗಂಡನ ಪಾರ್ಟ್‌ನಲ್ಲಿ ಯಾರಿದ್ದಾರೆ ಎಂದು ಮೃಣಾಲ್‌ಗೆ ಹೇಳಿರಲಿಲ್ಲವಂತೆ.

ಅವರು ಒಪ್ಪಿಕೊಂಡ ರಾಬಿಯಾ ಅಖ್ತರ್‌ ಪಾತ್ರಕ್ಕೂ ಆಮೇಲೆ ಸಿನಿಮಾದಲ್ಲಿ ಇದ್ದ ರಾಬಿಯಾ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ನನ್ನ ವಯಸ್ಸೇನು ಅವರ ವಯಸ್ಸೇನು. ನಾನು ಬಾಲಿವುಡ್‌ನ್ನು ನಂಬಬಾರದು ಅನ್ನೋಕೆ ಇದೊಂದು ಪಾಠ ಎಂದಿದ್ದಾರೆ.

Must Read