May 22, 2026
Friday, May 22, 2026
spot_img

ಬೇಸಿಗೆಯ ದಾಹ ತಣಿಸಲು ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತಿದ್ದೀರಾ? ಹಾಗಿದ್ರೆ ಈ ಅಪಾಯಗಳ ಬಗ್ಗೆ ಎಚ್ಚರವಿರಲಿ

ಬೇಸಿಗೆಯ ಸುಡುವ ಬಿಸಿಲಿನಿಂದ ಪಾರಾಗಲು ನಾವು ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದರೆ, ತಾತ್ಕಾಲಿಕವಾಗಿ ಬಾಯಾರಿಕೆ ತಣಿಸುವ ಈ ಪಾನೀಯಗಳು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡಬಹುದು ಎಂಬುದು ನಿಮಗೆ ತಿಳಿದಿದೆಯೇ?

ಸಾಫ್ಟ್ ಡ್ರಿಂಕ್ಸ್‌ಗಳಲ್ಲಿ ಸಕ್ಕರೆಯ ಪ್ರಮಾಣ ಅತಿಯಾಗಿರುತ್ತದೆ. ಇದು ದೇಹದಲ್ಲಿ ಕ್ಯಾಲೊರಿಗಳನ್ನು ಹೆಚ್ಚಿಸಿ, ಅಕಾಲಿಕ ತೂಕ ಹೆಚ್ಚಳ ಅಥವಾ ಬೊಜ್ಜಿಗೆ ಕಾರಣವಾಗುತ್ತದೆ.

ಪ್ರತಿದಿನ ಕೃತಕ ಸಿಹಿಯಿರುವ ಪಾನೀಯಗಳನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ. ಇದು ‘ಟೈಪ್ 2’ ಮಧುಮೇಹಕ್ಕೆ ನೇರ ದಾರಿಯಾಗಿದೆ.

ಇವುಗಳಲ್ಲಿರುವ ಆಮ್ಲೀಯ ಗುಣ ಮತ್ತು ಸಕ್ಕರೆ ಅಂಶವು ಹಲ್ಲಿನ ಎನಾಮಲ್ ಅನ್ನು ಹಾನಿಗೊಳಿಸುತ್ತದೆ. ಇದರಿಂದ ಹಲ್ಲು ಹುಟ್ಟುವುದು ಮತ್ತು ಹಲ್ಲು ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು.

ಕೆಲವು ಕಾರ್ಬೊನೇಟೆಡ್ ಪಾನೀಯಗಳಲ್ಲಿರುವ ಫಾಸ್ಫೊರಿಕ್ ಆಮ್ಲವು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದ ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ.

ಅತಿಯಾದ ಸೋಡಾ ಸೇವನೆಯು ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗಲು ಮತ್ತು ಕಿಡ್ನಿಯ ಕಾರ್ಯಕ್ಷಮತೆ ಕುಂಠಿತಗೊಳ್ಳಲು ಕಾರಣವಾಗಬಹುದು.

ಬಿಸಿಲಿನಲ್ಲಿ ತಣ್ಣಗಿರುವ ಪಾನೀಯಗಳನ್ನು ಕುಡಿದಾಗ ದೇಹದ ಉಷ್ಣತೆ ಮತ್ತು ಪಾನೀಯದ ತಂಪು ನಡುವೆ ಸಮತೋಲನ ತಪ್ಪಿ ಜೀರ್ಣಕ್ರಿಯೆ ನಿಧಾನವಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !