September 16, 2026
Wednesday, September 16, 2026
spot_img

ಭಾರತದ ಮೂಲಸೌಕರ್ಯಕ್ಕೆ ಆಸ್ಟ್ರೇಲಿಯಾದ ಬಿಗ್ ಬೂಸ್ಟ್: 2,800 ಕೋಟಿ ರೂ. ಹೊಸ ಹೂಡಿಕೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಆರ್ಥಿಕತೆ ಮೇಲಿನ ಜಾಗತಿಕ ಹೂಡಿಕೆದಾರರ ವಿಶ್ವಾಸ ಮತ್ತೊಮ್ಮೆ ಬಲಗೊಂಡಿದೆ. ಆಸ್ಟ್ರೇಲಿಯಾದ ಅತಿದೊಡ್ಡ ಪಿಂಚಣಿ ನಿಧಿಯಾದ AustralianSuper, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF)ಗೆ ಹೆಚ್ಚುವರಿಯಾಗಿ 500 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ (ಸುಮಾರು ₹2,800 ಕೋಟಿ) ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಒಟ್ಟು ಹೂಡಿಕೆ ₹18 ಸಾವಿರ ಕೋಟಿಗೂ ಹೆಚ್ಚು

ಈ ಹೊಸ ಹೂಡಿಕೆಯೊಂದಿಗೆ ಭಾರತದಲ್ಲಿನ ವಿವಿಧ ಕ್ಷೇತ್ರಗಳಲ್ಲಿ AustralianSuperನ ಒಟ್ಟು ಹೂಡಿಕೆ 3.3 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಭಾರತದ ಮೂಲಸೌಕರ್ಯ ಮತ್ತು ದೀರ್ಘಾವಧಿಯ ಬೆಳವಣಿಗೆಯ ಮೇಲಿನ ವಿಶ್ವಾಸವನ್ನು ಈ ನಿರ್ಧಾರ ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ:

ಸೀತಾರಾಮನ್‌, ಮೋದಿ ಸಂತಸ

ಹೂಡಿಕೆ ಘೋಷಣೆಯನ್ನು ಸ್ವಾಗತಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಆರ್ಥಿಕತೆಗೆ ಜಾಗತಿಕ ವಿಶ್ವಾಸ ಮತ್ತಷ್ಟು ಹೆಚ್ಚುತ್ತಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಕೂಡ ಈ ಹೂಡಿಕೆ ಭಾರತದ ಬೆಳವಣಿಗೆ ಮತ್ತು ಸುಧಾರಣಾ ನೀತಿಗಳ ಮೇಲಿನ ಅಂತಾರಾಷ್ಟ್ರೀಯ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತ ಹೂಡಿಕೆಗೆ ಸೂಕ್ತ ತಾಣ

ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ-ಆಸ್ಟ್ರೇಲಿಯಾ ಸಿಇಒ ವೇದಿಕೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಭಾರತವನ್ನು ದೀರ್ಘಾವಧಿಯ ಹೂಡಿಕೆಗೆ ಅತ್ಯುತ್ತಮ ತಾಣವೆಂದು ಬಣ್ಣಿಸಿದ್ದರು. ಇದೇ ವೇಳೆ AustralianSuper ಮುಖ್ಯಸ್ಥ ಪಾಲ್ ಶ್ರೋಡರ್, ಭಾರತದ ಸ್ಥಿರ ಆರ್ಥಿಕ ನೀತಿಗಳು ಹಾಗೂ ಹೂಡಿಕೆ ಸ್ನೇಹಿ ವಾತಾವರಣದ ಮೇಲೆ ವಿಶ್ವಾಸ ವ್ಯಕ್ತಪಡಿಸಿ, ಮುಂದೆಯೂ ಹೂಡಿಕೆ ಹೆಚ್ಚಿಸುವ ಸೂಚನೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !