September 30, 2026
Wednesday, September 30, 2026
spot_img

ಬಾಂಗ್ಲಾ ಚುನಾವಣೆ | BNPಗೆ ಭರ್ಜರಿ ಗೆಲುವು: ತಾರಿಕ್ ರೆಹಮಾನ್‌ಗೆ ಮೋದಿ ಕಂಗ್ರಾಟ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ ಭಾರೀ ಗೆಲುವು ಸಾಧಿಸಿದ್ದು, ಅದರ ನಾಯಕ ತಾರಿಕ್ ರೆಹಮಾನ್ ಗೆ ಫಲಿತಾಂಶ ಪ್ರಕಟವಾದ ತಕ್ಷಣ ನರೇಂದ್ರ ಮೋದಿ ಅವರು ಅಭಿನಂದನಾ ಸಂದೇಶ ಕಳುಹಿಸಿ, ಭಾರತವು ಸದಾ ಬಾಂಗ್ಲಾದೇಶದ ಜೊತೆ ನಿಂತಿರುತ್ತದೆ ಎಂದು ತಿಳಿಸಿದ್ದಾರೆ.

300 ಸದಸ್ಯರ ಸಂಸತ್ತಿನಲ್ಲಿ ಬಿಎನ್‌ಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದೆ. ಜಮಾತ್ ನೇತೃತ್ವದ ಮೈತ್ರಿಕೂಟವು ಸುಮಾರು 70 ಸ್ಥಾನಗಳಲ್ಲಿ ಗೆಲುವು ಕಂಡಿದೆ ಎಂದು ವರದಿಯಾಗಿದೆ. ಸುಮಾರು 20 ವರ್ಷಗಳ ನಂತರ ಬಿಎನ್‌ಪಿ ಮೊದಲಬಾರಿಗೆ ಸರ್ಕಾರ ರಚಿಸಲಿದೆ.

ಇದನ್ನೂ ಓದಿ:

ಹಿಂದಿನ ಪ್ರಧಾನಿಗಳಾದ ಖಲೀದಾ ಜಿಯಾ ಹಾಗೂ ಶೇಖ್ ಹಸೀನಾ ಅವರ ದೀರ್ಘಕಾಲದ ರಾಜಕೀಯ ಪ್ರಭಾವದ ನಂತರ ಈ ಫಲಿತಾಂಶ ದೇಶದ ರಾಜಕೀಯ ದಿಕ್ಕು ಬದಲಿಸುವ ಸೂಚನೆ ನೀಡುತ್ತಿದೆ.

Must Read