November 2, 2026
Monday, November 2, 2026
spot_img

CINE | ಕಂಗನಾ ಕನಸಿಗೆ ಕೊಳ್ಳಿ ಇಟ್ಟ ಬಾಕ್ಸ್ ಆಫೀಸ್: ಮೊದಲ ವಾರದಲ್ಲೇ ಕುಸಿದ ‘ಭಾರತ್ ಭಾಗ್ಯ ವಿಧಾತ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೇ ಹಿನ್ನಡೆ ಅನುಭವಿಸಿದೆ. ಜೂನ್ 12ರಂದು ಬಿಡುಗಡೆಯಾದ ಈ ಚಿತ್ರ ಮೊದಲ ವಾರದಲ್ಲಿ ಕೇವಲ ₹6.55 ಕೋಟಿ ಗಳಿಕೆ ಮಾಡಿದೆ.

ಬಜೆಟ್‌ಗೆ ಹೋಲಿಸಿದರೆ ಕಡಿಮೆ ಆದಾಯ

ಸುಮಾರು ₹35 ರಿಂದ ₹40 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಬಂದಿರುವ ಆರಂಭಿಕ ಕಲೆಕ್ಷನ್ ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ. ಹೂಡಿಕೆಯ ಮೊತ್ತ ವಾಪಸ್ ಸಿಗುವುದೇ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ:

ಮೊದಲ ವಾರದ ಬಳಿಕ ಕುಸಿದ ಗಳಿಕೆ

ಆರಂಭದ ದಿನಗಳಲ್ಲಿ ಸ್ವಲ್ಪ ಮಟ್ಟಿನ ಪ್ರತಿಕ್ರಿಯೆ ಸಿಕ್ಕಿದ್ದರೂ, ವಾರದ ಮಧ್ಯಭಾಗದಿಂದ ಚಿತ್ರದ ಕಲೆಕ್ಷನ್ ಗಣನೀಯವಾಗಿ ಇಳಿಕೆಯಾಗಿದೆ. ದಿನದಿಂದ ದಿನಕ್ಕೆ ಗಳಿಕೆ ಲಕ್ಷಗಳ ಮಟ್ಟಕ್ಕೆ ಕುಸಿದಿರುವುದು ಚಿತ್ರಕ್ಕೆ ಹಿನ್ನಡೆಯಾಗಿದೆ. ಈ ವಾರ ಬಿಡುಗಡೆಯಾದ ಹೊಸ ಚಿತ್ರಗಳ ಪೈಪೋಟಿಯಿಂದ ‘ಭಾರತ್ ಭಾಗ್ಯ ವಿಧಾತ’ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ.

ನೈಜ ಘಟನೆಯಾಧಾರಿತ ಸಿನಿಮಾ

2008ರ ಮುಂಬೈ ಭಯೋತ್ಪಾದನಾ ದಾಳಿಯ ವೇಳೆ ಹಲವು ಗರ್ಭಿಣಿಯರ ಜೀವ ಉಳಿಸಿದ ನರ್ಸ್ ಅಂಜಲಿ ಕುಲ್ತೆ ಅವರ ಜೀವನದ ಸ್ಫೂರ್ತಿದಾಯಕ ಘಟನೆಯನ್ನು ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ. ಈ ಚಿತ್ರವನ್ನು ಹರಿಯಾಣ ಸರ್ಕಾರ ತೆರಿಗೆ ಮುಕ್ತಗೊಳಿಸಿದ್ದರೂ, ಪ್ರೇಕ್ಷಕರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಸಿಗದ ಕಾರಣ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಹಿನ್ನಡೆ ಅನುಭವಿಸುತ್ತಿದೆ.

Must Read