July 12, 2026
Sunday, July 12, 2026
spot_img

CINE | ಘುಷ್ಖೋರ್ ಪಂಡಿತ್ ವಿವಾದ ಅಂತ್ಯ: ಟೈಟಲ್ ಬದಲಾವಣೆಗೆ ಒಪ್ಪಿದ ನಿರ್ಮಾಪಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಇತ್ತೀಚೆಗೆ ಚರ್ಚೆಗೆ ಗ್ರಾಸವಾದ ‘ಘುಷ್ಖೋರ್ ಪಂಡಿತ್’ ಚಿತ್ರದ ಶೀರ್ಷಿಕೆ ವಿವಾದ ಇದೀಗ ತಿರುವು ಪಡೆದುಕೊಂಡಿದೆ. ಸಮುದಾಯದ ಆಕ್ಷೇಪಣೆಗಳ ನಡುವೆ ನಿರ್ಮಾಪಕ ನೀರಜ್ ಪಾಂಡೆ ಚಿತ್ರಕ್ಕೆ ಮರುನಾಮಕರಣ ಮಾಡುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

ಚಿತ್ರದ ಶೀರ್ಷಿಕೆ ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಹಲವು ಕಡೆ ಪ್ರತಿಭಟನೆಗಳು ನಡೆದಿದ್ದವು. ಈ ಕುರಿತು ಎಫ್‌ಐಆರ್ ದಾಖಲಾಗಿದ್ದು, ಚಿತ್ರದ ಬಿಡುಗಡೆಯನ್ನು ತಡೆಯುವಂತೆ ಅರ್ಜಿ ಸಲ್ಲಿಸಲಾಗಿತ್ತು.

ವಿವಾದದ ಹಿನ್ನೆಲೆ­ಯಲ್ಲಿ ಪಾಂಡೆ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ‘ಘುಷ್ಖೋರ್ ಪಂಡಿತ್’ ಎಂಬ ಹೆಸರನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಆ ಶೀರ್ಷಿಕೆಯಡಿ ಬಿಡುಗಡೆಗೊಂಡಿದ್ದ ಪೋಸ್ಟರ್‌, ಟೀಸರ್ ಹಾಗೂ ಇತರ ಪ್ರಚಾರ ಸಾಮಗ್ರಿಗಳನ್ನು ವಾಪಸ್ ಪಡೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ನ್ಯಾಯಮೂರ್ತಿಗಳ ಪೀಠವು ಈ ಹೇಳಿಕೆಯನ್ನು ದಾಖಲಿಸಿಕೊಂಡು ಅರ್ಜಿಯನ್ನು ವಜಾಗೊಳಿಸಿದೆ. ಹೊಸ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲವಾದರೂ, ಅದು ಹಿಂದಿನ ಹೆಸರಿಗೆ ಹೋಲಿಕೆಯಾಗುವುದಿಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಮನೋಜ್ ಬಾಜಪೇಯಿ ಅಭಿನಯದ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪ್ರಸ್ತುತ ಎಡಿಟಿಂಗ್ ಹಂತದಲ್ಲಿದೆ. ಹೊಸ ಹೆಸರಿನೊಂದಿಗೆ ಚಿತ್ರ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !