July 29, 2026
Wednesday, July 29, 2026
spot_img

CINE| ಪರಭಾಷೆಗಳಿಗೂ ಲಗ್ಗೆ ಇಡಲಿದೆ ‘ಕರಾವಳಿ’: ಕಂಬಳದ ಕಥೆಗೆ ದೇಶಾದ್ಯಂತ ಡಿಮ್ಯಾಂಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಗೆ ಮರುಜೀವ ನೀಡಿದ ನಿರ್ದೇಶಕ ಗುರುದತ್ ಗಾಣಿಗ ‘ಕರಾವಳಿ’ ಸಿನಿಮಾ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭರಪೂರ ಪ್ರಶಂಸೆ ಪಡೆದಿರುವ ಈ ಚಿತ್ರ, ಸದ್ಯದಲ್ಲೇ ಬಹುಭಾಷೆಗಳಿಗೆ ಡಬ್ ಆಗುತ್ತಿದ್ದು, ಇದರ ಜತೆಯಲ್ಲೇ ದುಬೈ ಹಾಗೂ ಅಬುಧಾಬಿಯಲ್ಲೂ ಅಬ್ಬರಿಸಲು ರೆಡಿಯಾಗಿದೆ.

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕರಾವಳಿ’ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳದ ಕಥಾಹಂದರವನ್ನು ಅದ್ಭುತವಾಗಿ ತೆರೆಮೇಲೆ ತಂದಿರುವ ಈ ಚಿತ್ರ ಕರ್ನಾಟಕದಲ್ಲಿ ಧೂಳೆಬ್ಬಿಸಿ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.

ಜುಲೈ 31 ರಿಂದ ದುಬೈ, ಅಬುಧಾಬಿಯಲ್ಲಿ ರಿಲೀಸ್:

ರಾಜ್ಯದಲ್ಲಿ ಯಶಸ್ವಿಯಾದ ಬೆನ್ನಲ್ಲೇ ‘ಕರಾವಳಿ’ ಸಿನಿಮಾ ಗಲ್ಫ್ ರಾಷ್ಟ್ರಗಳಿಗೂ ಎಂಟ್ರಿ ನೀಡುತ್ತಿದೆ. ಇದೇ ಶುಕ್ರವಾರದಿಂದ (ಜುಲೈ 31) ದುಬೈ ಹಾಗೂ ಅಬುಧಾಬಿಯಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ದಕ್ಷಿಣ ಭಾರತದ ಬಹುತೇಕ ಹಿಟ್ ಸಿನಿಮಾಗಳನ್ನು ವಿದೇಶಗಳಲ್ಲಿ ರಿಲೀಸ್‌ ಮಾಡಿರುವ ಪ್ರಖ್ಯಾತ ‘ಫಾರಾಸ್ ಸಿನಿಮಾಸ್’ ಸಂಸ್ಥೆಯು ಕರಾವಳಿ ಸಿನಿಮಾದ ಓವರ್‌ಸೀಸ್ ರಿಲೀಸ್‌ ಹಕ್ಕುಗಳನ್ನು ಪಡೆದುಕೊಂಡಿದ್ದು, ಗಲ್ಫ್ ಕನ್ನಡಿಗರಿಗೆ ಕಂಬಳದ ವೈಭವವನ್ನು ಉಣಬಡಿಸಲು ಸಜ್ಜಾಗಿದೆ.

6 ದಿನಕ್ಕೆ 6 ಕೋಟಿಗೂ ಅಧಿಕ ಕಲೆಕ್ಷನ್:

ಜುಲೈ 24 ರಂದು ರಾಜ್ಯದ 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಕರಾವಳಿ’ಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ತೆರೆಕಂಡ ಮೊದಲ ದಿನವೇ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಈ ಸಿನಿಮಾ, ಇದುವರೆಗೆ ಒಟ್ಟಾರೆಯಾಗಿ ಬರೋಬ್ಬರಿ 6 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

ಇದನ್ನೂ ಓದಿ:

ಪರಭಾಷೆಗೂ ಡಿಮ್ಯಾಂಡ್:

ಬಿಡುಗಡೆಯಾದ ಕೇವಲ 6 ದಿನಗಳಲ್ಲೇ 5 ಲಕ್ಷಕ್ಕೂ ಹೆಚ್ಚು ಜನರು ಚಿತ್ರಮಂದಿರಗಳಲ್ಲಿ ಕರಾವಳಿ ಸಿನಿಮಾವನ್ನು ವೀಕ್ಷಿಸಿದ್ದಾರೆ ಎಂದು ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಬೆಂಬಲ ಮತ್ತು ಕ್ರೇಜ್ ನೋಡಿ ಪರಭಾಷೆಯಲ್ಲೂ ಚಿತ್ರಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ ಶೀಘ್ರದಲ್ಲೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !