April 12, 2026
Sunday, April 12, 2026
spot_img

ಕ್ರಿಕೆಟ್ ಸ್ಟಾರ್ ಪ್ಲೇಯರ್ ಈಗ ಭಗ್ನಾನಿ ಫ್ಲಾಟ್ ಒಡೆಯ: 20 ಕೋಟಿ ಡೀಲ್ ಹಿಂದಿದೆ ಬಿಗ್ ರೀಸನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಅವರ ಮಾವ ಹಾಗೂ ಹಿರಿಯ ನಿರ್ಮಾಪಕ ವಶು ಭಗ್ನಾನಿ ಅವರು ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್‌ನಲ್ಲಿ ಜೋರಾಗಿ ಕೇಳಿಬರುತ್ತಿದೆ. ಸತತ ಸಿನಿಮಾಗಳ ಸೋಲಿನಿಂದ ಕೈ ಸುಟ್ಟುಕೊಂಡಿರುವ ಅವರು, ಈಗ ಹಣಕಾಸಿನ ಹೊಂದಾಣಿಕೆಗಾಗಿ ರಿಯಲ್ ಎಸ್ಟೇಟ್ ವ್ಯವಹಾರದತ್ತ ಮುಖ ಮಾಡಿದ್ದಾರೆ.

ವಶು ಭಗ್ನಾನಿ, ಅವರ ಪುತ್ರ ಜಾಕಿ ಭಗ್ನಾನಿ ಹಾಗೂ ಪತ್ನಿ ಪೂಜಾ ಭಗ್ನಾನಿ ಅವರು ಮುಂಬೈನ ಜುಹು ಪ್ರದೇಶದಲ್ಲಿ ಹೊಂದಿದ್ದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಶುಭ್‌ಮನ್ ಗಿಲ್ ಖರೀದಿಸಿದ್ದಾರೆ. 12ನೇ ಮಹಡಿಯಲ್ಲಿರುವ 3,369 ಚದರ ಅಡಿ ವಿಸ್ತೀರ್ಣದ ಈ ಮನೆಗೆ ಗಿಲ್ ಬರೋಬ್ಬರಿ ₹20.7 ಕೋಟಿ ನೀಡಿದ್ದಾರೆ ಎನ್ನಲಾಗಿದೆ.

‘ಕೂಲಿ ನಂಬರ್ 1’, ‘ಬಿವಿ ನಂಬರ್ 1’ ನಂತಹ ಹಿಟ್ ಚಿತ್ರಗಳನ್ನು ನೀಡಿದ್ದ ವಶು ಅವರ ನಿರ್ಮಾಣ ಸಂಸ್ಥೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ನೆಲಕಚ್ಚಿದೆ. ಅದರಲ್ಲೂ ಅಕ್ಷಯ್ ಕುಮಾರ್ ಅಭಿನಯದ ‘ಮಿಷನ್ ರಾಣಿಗಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದು ದೊಡ್ಡ ಹೊಡೆತ ನೀಡಿದೆ. ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಅವರಿಗೆ ಸರಿಯಾಗಿ ಸಂಭಾವನೆಯನ್ನೂ ನೀಡಿರಲಿಲ್ಲ. ಪರಿಸ್ಥಿತಿ ಅರಿತ ಅಕ್ಷಯ್, “ನಿಮ್ಮ ಬಳಿ ಹಣವಿದ್ದಾಗ ನೀಡಿ” ಎಂದು ಹೇಳುವ ಮೂಲಕ ಔದಾರ್ಯ ತೋರಿದ್ದರು ಎನ್ನಲಾಗಿದೆ.

ಆರ್ಥಿಕ ಸಂಕಷ್ಟದ ನಡುವೆಯೂ ವಶು ಭಗ್ನಾನಿ ಅವರು ಚಿತ್ರರಂಗವನ್ನು ತೊರೆಯುತ್ತಿಲ್ಲ. ಕೆಲವು ಸಿನಿಮಾಗಳ ನಿರ್ಮಾಣ ಕಾರ್ಯಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಅವುಗಳ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡುವ ತಯಾರಿಯಲ್ಲಿದ್ದಾರೆ. ಆದರೆ, ಸದ್ಯದ ಮಟ್ಟಿಗೆ ಸಾಲ ಹಾಗೂ ನಷ್ಟದ ಹೊರೆ ಇಳಿಸಲು ಅವರು ತಮ್ಮ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !