September 28, 2026
Monday, September 28, 2026
spot_img

SNACKS | ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ಗರಿಗರಿಯಾದ ಆಲೂ ಕಟ್ಲೆಟ್: ಇಲ್ಲಿದೆ ಸುಲಭ ರೆಸಿಪಿ

ಆಲೂ ಕಟ್ಲೆಟ್ ಎಂದರೆ ಉತ್ತರ ಭಾರತದ ಅತ್ಯಂತ ಜನಪ್ರಿಯ ಮತ್ತು ಗರಿಗರಿಯಾದ ಸಂಜೆಯ ತಿಂಡಿಯಾಗಿದೆ. ಇದು ಹಸಿರು ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಸವಿಯಲು ಅದ್ಭುತವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ
ಕಾರ್ನ್ ಫ್ಲೋರ್ ಅಥವಾ ಅಕ್ಕಿ ಹಿಟ್ಟು
ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಚಾಟ್ ಮಸಾಲಾ ಪುಡಿ
ಜೀರಿಗೆ ಪುಡಿ
ಅಚ್ಚ ಖಾರದ ಪುಡಿ
ಉಪ್ಪು
ಎಣ್ಣೆ

ಮಾಡುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಗಂಟಿಲ್ಲದಂತೆ ಚೆನ್ನಾಗಿ ಮ್ಯಾಶ್ ಮಾಡಿಕೊಂಡು, ಇದಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲಾ, ಜೀರಿಗೆ ಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊನೆಯಲ್ಲಿ ಕಾರ್ನ್ ಫ್ಲೋರ್ ಅಥವಾ ಅಕ್ಕಿ ಹಿಟ್ಟು ಸೇರಿಸಿ, ನೀರು ಹಾಕದೆಯೇ ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿಕೊಳ್ಳಬೇಕು.

ನಂತರ ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಸವರಿ, ಕಲಸಿದ ಮಿಶ್ರಣದಿಂದ ನಿಂಬೆಹಣ್ಣಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಉಂಡೆ ಮಾಡಿ, ನಂತರ ಅಂಗೈ ಮಧ್ಯೆ ಇಟ್ಟು ಲಘುವಾಗಿ ಒತ್ತಿ ದುಂಡಗಿನ ಕಟ್ಲೆಟ್ ಆಕಾರ ನೀಡಿ. ಇದೇ ರೀತಿ ಎಲ್ಲಾವನ್ನು ಸಿದ್ಧಪಡಿಸಿ ಇಟ್ಟುಕೊಂಡು, ಒಂದು ತವಾ ಅಥವಾ ಫ್ರೈಯಿಂಗ್ ಪ್ಯಾನ್‌ಗೆ 3 ರಿಂದ 4 ಚಮಚ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಸಿದ್ಧಪಡಿಸಿದ ಆಲೂ ಕಟ್ಲೆಟ್‌ಗಳನ್ನು ಪ್ಯಾನ್‌ನಲ್ಲಿ ಒಂದೊಂದಾಗಿ ಇಡಬೇಕು. ಕೆಳಭಾಗವು ಚಿನ್ನದ ಬಣ್ಣಕ್ಕೆ ತಿರುಗಿದ ನಂತರ, ನಿಧಾನವಾಗಿ ಇನ್ನೊಂದು ಬದಿಗೆ ತಿರುಗಿ ಹಾಕಿ. ಎರಡು ಕಡೆಯೂ ಚೆನ್ನಾಗಿ ಕ್ರಿಸ್ಪಿ ಮತ್ತು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಬಿಸಿಬಿಸಿಯಾದ,ಆಲೂ ಕಟ್ಲೆಟ್ ಸಿದ್ದವಾಗುತ್ತದೆ.

Must Read