October 10, 2026
Saturday, October 10, 2026
spot_img

CSK vs KKR | ಚೆಪಾಕ್‌ನಲ್ಲಿ ಚೆನ್ನೈ ಅಬ್ಬರ: ಸತತ ನಾಲ್ಕನೇ ಪಂದ್ಯದಲ್ಲೂ ನೆಲಕಚ್ಚಿದ ಕೆಕೆಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈನ ಐತಿಹಾಸಿಕ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 32 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಸತತ ಎರಡನೇ ಜಯ ಸಾಧಿಸಿರುವ ಸಿಎಸ್‌ಕೆ, ಅಂಕಪಟ್ಟಿಯಲ್ಲಿ ಮೇಲೇರಲು ಮಹತ್ವದ ಹೆಜ್ಜೆ ಇಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡಕ್ಕೆ ಸಂಜು ಸ್ಯಾಮ್ಸನ್ ಸ್ಫೋಟಕ ಆರಂಭ ನೀಡಿದರು. ಅವರು 48 ರನ್‌ಗಳಿಸಿ ತಂಡಕ್ಕೆ ಗಟ್ಟಿಯಾದ ನೆಲೆ ಒದಗಿಸಿದರು. ಆಯುಷ್ ಮ್ಹಾತ್ರೆ ಕೇವಲ 17 ಎಸೆತಗಳಲ್ಲಿ 38 ರನ್‌ಗಳ ಚುರುಕಿನ ಇನ್ನಿಂಗ್ಸ್ ಆಡಿದರು. ಮಧ್ಯಕ್ರಮದಲ್ಲಿ ಡೆವಾಲ್ಡ್ ಬ್ರೆವಿಸ್ 41 ಮತ್ತು ಸರ್ಫರಾಜ್ ಖಾನ್ 23 ರನ್‌ಗಳಿಸಿ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 192/5ಕ್ಕೆ ಕೊಂಡೊಯ್ದರು.

193 ರನ್‌ಗಳ ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ಫಿನ್ ಅಲೆನ್ ಕೇವಲ 1 ರನ್‌ಗೆ ಔಟಾದರೆ, ಸುನಿಲ್ ನರೈನ್ 24 ಮತ್ತು ಅಂಗ್‌ಕ್ರಿಶ್ ರಘುವಂಶಿ 27 ರನ್‌ಗಳೊಂದಿಗೆ ಪೆವಿಲಿಯನ್ ಸೇರಿದರು. ನಾಯಕ ಅಜಿಂಕ್ಯ ರಹಾನೆ 28 ರನ್‌ಗಳಿಸಿ ಔಟಾದ ನಂತರ ತಂಡದ ಚೇಸ್ ಮತ್ತಷ್ಟು ಕಷ್ಟವಾಯಿತು.

ಇದನ್ನೂ ಓದಿ:

ಸಿಎಸ್‌ಕೆ ಪರ ನೂರ್ ಅಹ್ಮದ್ ಮ್ಯಾಚ್‌ ವಿನ್ನಿಂಗ್ ಸ್ಪೆಲ್ ಎಸೆದು 3 ವಿಕೆಟ್ ಕಬಳಿಸಿದರು. ಕೊನೆಯ ಹಂತದಲ್ಲಿ ರಮಣ್‌ದೀಪ್ ಸಿಂಗ್ ಮತ್ತು ರೋವ್‌ಮನ್ ಪೊವೆಲ್ ಹೋರಾಟ ನಡೆಸಿದರೂ, ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಕೆಕೆಆರ್ 20 ಓವರ್‌ಗಳಲ್ಲಿ 160/7ಕ್ಕೆ ಸೀಮಿತವಾಯಿತು.

ಈ ಗೆಲುವಿನೊಂದಿಗೆ ಚೆನ್ನೈ ಶಿಬಿರದಲ್ಲಿ ಹೊಸ ಉತ್ಸಾಹ ಮೂಡಿದ್ದು, ಅಭಿಮಾನಿಗಳು ಮತ್ತೆ ಪ್ಲೇಆಫ್ ಕನಸು ಕಾಣುತ್ತಿದ್ದಾರೆ.

Must Read