ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಕುರಿತು ದಿನಕ್ಕೊಂದು ಹೊಸ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಅದೇ ರೀತಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಹೊಸ ಫೋಟೋವೊಂದು ಈಗ ಇಂಟರ್ನೆಟ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಫೋಟೋದಲ್ಲಿ ನಯನತಾರಾ ಅವರು ಸಂಪೂರ್ಣವಾಗಿ ತಲೆ ಬೋಳಿಸಿಕೊಂಡಿರುವುದು ಕಂಡುಬಂದಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆದರೆ, ಈ ವೈರಲ್ ಫೋಟೋಗಳ ಹಿಂದಿನ ಅಸಲಿ ಸತ್ಯ ಈಗ ಬಯಲಾಗಿದೆ.
ವೈರಲ್ ಫೋಟೋದ ಅಸಲಿ ಸತ್ಯ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರದಲ್ಲಿ ನಯನತಾರಾ ಅವರು ಕ್ಲೀನ್ ಶೇವ್ಡ್ ಹೆಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರೊಂದಿಗೆ ನಟಿಸುತ್ತಿರುವ ‘ಟಾಕ್ಸಿಕ್’ ಚಿತ್ರ ಹಾಗೂ ಸಲ್ಮಾನ್ ಖಾನ್ ಅಭಿನಯದ ‘SVC63’ ಚಿತ್ರಗಳ ಬಿಡುಗಡೆಯ ಹಂತದಲ್ಲಿ ಈ ಫೋಟೋಗಳು ಬಂದಿರುವುದರಿಂದ ಫ್ಯಾನ್ಸ್ ನಿಜವೆಂದೇ ನಂಬಿದ್ದರು.
ಆದರೆ ನಯನತಾರಾ ಅವರು ಯಾವುದೇ ದೇವಸ್ಥಾನದಲ್ಲಾಗಲಿ ತಲೆ ಮುಡಿ ಕೊಟ್ಟಿಲ್ಲ. ವೈರಲ್ ಆಗಿರುವ ಈ ಚಿತ್ರವು ಸಂಪೂರ್ಣವಾಗಿ ನಕಲಿಯಾಗಿದೆ. ಕೆಲವು ನೆಟ್ಟಿಗರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ಅವರ ಫೋಟೋವನ್ನು ಎಜಿಟ್ ಮಾಡಿದ್ದಾರೆ. ನಯನತಾರಾ ಸದ್ಯ ತಮ್ಮ ಎಂದಿನ ಲುಕ್‌ನಲ್ಲೇ ಇದ್ದು, ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ:
‘ಟಾಕ್ಸಿಕ್’ ಸಿನಿಮಾದ ಇತ್ತೀಚಿನ ಅಪ್ಡೇಟ್:
ನಯನತಾರಾ ಸದ್ಯ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಯಶ್ ಮುಖ್ಯ ಪಾತ್ರದಲ್ಲಿದ್ದರೆ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಗೋವಾದ ಸುಂದರ ಸಮುದ್ರ ತೀರದ ಹಿನ್ನೆಲೆಯಲ್ಲಿ ನಡೆಯುವ ಕರಾಳ ಮಾದಕ ದ್ರವ್ಯ ಜಾಲದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರವು ವಿಶ್ವದಾದ್ಯಂತ ಆಗಸ್ಟ್ 26 ರಂದು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.



