September 14, 2026
Monday, September 14, 2026
spot_img

ಹಲ್ಲುಜ್ಜುವಾಗ ಬ್ರಷ್‌ ತುಂಬಾ ಟೂತ್‌ಪೇಸ್ಟ್‌ನಿಂದ ತುಂಬಿಸುತ್ತೀರಾ? ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಡೇಂಜರ್

ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ನಮ್ಮ ದಿನಚರಿಯ ಸಾಮಾನ್ಯ ಭಾಗ. ಆದರೆ ಹಲ್ಲು ಸ್ವಚ್ಛವಾಗಿರಲಿ ಎಂದು ಬ್ರಷ್‌ ಮೇಲೆ ಹೆಚ್ಚು ಟೂತ್‌ಪೇಸ್ಟ್ ಹಾಕಿಕೊಳ್ಳುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ವಿಚಾರ ತಿಳಿದುಕೊಳ್ಳುವುದು ಮುಖ್ಯ. ಟೂತ್‌ಪೇಸ್ಟ್ ಹೆಚ್ಚು ಹಾಕಿದರೆ ಹಲ್ಲುಗಳು ಇನ್ನಷ್ಟು ಸ್ವಚ್ಛವಾಗುತ್ತವೆ ಎಂಬುದು ಸರಿಯಲ್ಲ. ಬದಲಾಗಿ, ವಿಶೇಷವಾಗಿ ಮಕ್ಕಳಲ್ಲಿ ಅತಿಯಾದ ಫ್ಲೋರೈಡ್ ಸೇವನೆಯಂತಹ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅಗತ್ಯ.

ಹೆಚ್ಚು ಟೂತ್‌ಪೇಸ್ಟ್ ಬೇಕಿಲ್ಲ

ಹಲ್ಲುಜ್ಜಲು ಬ್ರಷ್‌ ತುಂಬಾ ಟೂತ್‌ಪೇಸ್ಟ್‌ನಿಂದ ಮುಚ್ಚುವಷ್ಟು ಪ್ರಮಾಣ ಬೇಕಾಗುವುದಿಲ್ಲ. ವಯಸ್ಕರು ಸಾಮಾನ್ಯವಾಗಿ ಬಟಾಣಿ ಗಾತ್ರದಷ್ಟು ಫ್ಲೋರೈಡ್ ಟೂತ್‌ಪೇಸ್ಟ್ ಬಳಸಿದರೆ ಸಾಕಾಗುತ್ತದೆ. ಹೆಚ್ಚು ಪೇಸ್ಟ್ ಬಳಸುವುದರಿಂದ ಹಲ್ಲು ಸ್ವಚ್ಛಗೊಳಿಸುವ ಸಾಮರ್ಥ್ಯ ಅದೇ ಪ್ರಮಾಣದಲ್ಲಿ ಹೆಚ್ಚುವುದಿಲ್ಲ.

ಮಕ್ಕಳಿಗೆ ಇನ್ನಷ್ಟು ಎಚ್ಚರಿಕೆ

ಚಿಕ್ಕ ಮಕ್ಕಳು ಹಲ್ಲುಜ್ಜುವಾಗ ಟೂತ್‌ಪೇಸ್ಟ್ ನುಂಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಅವರ ವಯಸ್ಸಿಗೆ ಅನುಗುಣವಾಗಿ ಕಡಿಮೆ ಪ್ರಮಾಣದ ಫ್ಲೋರೈಡ್ ಟೂತ್‌ಪೇಸ್ಟ್ ಬಳಸಬೇಕು. ಪದೇಪದೇ ಹೆಚ್ಚಿನ ಪ್ರಮಾಣದ ಫ್ಲೋರೈಡ್ ನುಂಗಿದರೆ ಹಲ್ಲುಗಳ ಬೆಳವಣಿಗೆಯ ಸಂದರ್ಭದಲ್ಲಿ ಡೆಂಟಲ್ ಫ್ಲೋರೋಸಿಸ್ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:

ಬ್ರಷ್ ಮಾಡುವ ವಿಧಾನವೂ ಮುಖ್ಯ

ಟೂತ್‌ಪೇಸ್ಟ್ ಪ್ರಮಾಣಕ್ಕಿಂತ ಹಲ್ಲುಜ್ಜುವ ಸರಿಯಾದ ವಿಧಾನ ಹೆಚ್ಚು ಮುಖ್ಯ. ದಿನಕ್ಕೆ ಎರಡು ಬಾರಿ ಸುಮಾರು ಎರಡು ನಿಮಿಷಗಳ ಕಾಲ ಮೃದುವಾಗಿ ಬ್ರಷ್ ಮಾಡುವುದು, ಹಲ್ಲುಗಳ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುವುದು ಮತ್ತು ಹಲ್ಲುಗಳ ನಡುವೆ ಉಳಿಯುವ ಆಹಾರ ಕಣಗಳನ್ನು ತೆಗೆದುಹಾಕುವುದು ಮುಖ್ಯ.

ಹೆಚ್ಚು ಪೇಸ್ಟ್ ಅಂದ್ರೆ ಹೆಚ್ಚು ಸ್ವಚ್ಛತೆ ಅಲ್ಲ

ಹಲ್ಲುಗಳ ಆರೋಗ್ಯ ಕಾಪಾಡಲು ಹೆಚ್ಚು ಟೂತ್‌ಪೇಸ್ಟ್ ಬಳಸುವುದಕ್ಕಿಂತ ಸರಿಯಾದ ಪ್ರಮಾಣದಲ್ಲಿ ಫ್ಲೋರೈಡ್ ಟೂತ್‌ಪೇಸ್ಟ್ ಬಳಸಿ ನಿಯಮಿತವಾಗಿ ಬ್ರಷ್ ಮಾಡುವುದು ಮುಖ್ಯ. ಹಲ್ಲುಗಳಲ್ಲಿ ನಿರಂತರ ನೋವು, ಸಂವೇದನೆ, ಕಲೆ ಅಥವಾ ಇತರ ಸಮಸ್ಯೆಗಳು ಕಂಡುಬಂದರೆ ದಂತವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !