ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ಕ್ಕೆ ತೆರೆ ಬಿದ್ದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ. ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ಪ್ರಶಸ್ತಿಯೊಂದಿಗೆ ಭಾರೀ ನಗದು ಬಹುಮಾನವನ್ನೂ ತನ್ನದಾಗಿಸಿಕೊಂಡಿದೆ.
ಟ್ರೋಫಿ ಗೆದ್ದ ಬೆಂಗಳೂರು
ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಆರ್‌ಸಿಬಿ ಅಂತಿಮ ಹಣಾಹಣಿಯಲ್ಲೂ ಮೇಲುಗೈ ಸಾಧಿಸಿ ಕಪ್ ಎತ್ತಿಹಿಡಿಯಿತು. ಗುಜರಾತ್ ಟೈಟಾನ್ಸ್ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟರೆ, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದವು.
ಇದನ್ನೂ ಓದಿ:
ವೈಭವ್ ಹೆಸರಿಗೆ ಪ್ರಶಸ್ತಿಗಳ ಸುರಿಮಳೆ
ಈ ಆವೃತ್ತಿಯ ಅತಿ ದೊಡ್ಡ ಆಕರ್ಷಣೆಯಾಗಿ ಹೊರಹೊಮ್ಮಿದ 15 ವರ್ಷದ ವೈಭವ್ ಸೂರ್ಯವಂಶಿ ಹಲವು ವೈಯಕ್ತಿಕ ಪ್ರಶಸ್ತಿಗಳನ್ನು ಬಾಚಿಕೊಂಡರು. ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ಪಡೆದ ಅವರು, ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್, ಎಮರ್ಜಿಂಗ್ ಪ್ಲೇಯರ್ ಹಾಗೂ ಸೂಪರ್ ಸ್ಟ್ರೈಕರ್ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡರು.
IPL 2026 ವೈಯಕ್ತಿಕ ಪ್ರಶಸ್ತಿ ವಿಜೇತರು
ಆರೆಂಜ್ ಕ್ಯಾಪ್
ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – 776 ರನ್ – ₹10 ಲಕ್ಷ
ಪರ್ಪಲ್ ಕ್ಯಾಪ್
ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್) – 29 ವಿಕೆಟ್ – ₹10 ಲಕ್ಷ
ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ (MVP)
ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ₹15 ಲಕ್ಷ
ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್
ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ₹10 ಲಕ್ಷ
ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್
ವೈಭವ್ ಸೂರ್ಯವಂಶಿ – ಸ್ಟ್ರೈಕ್ ರೇಟ್ 237.3 – ₹10 ಲಕ್ಷ + ಟಾಟಾ ಸಿಯೆರಾ ಕಾರು
ಸೂಪರ್ ಸಿಕ್ಸರ್ಸ್ ಪ್ರಶಸ್ತಿ
ವೈಭವ್ ಸೂರ್ಯವಂಶಿ – 72 ಸಿಕ್ಸರ್‌ಗಳು – ₹10 ಲಕ್ಷ
ಹೆಚ್ಚು ಫೋರ್ ಬಾರಿಸಿದ ಆಟಗಾರ
ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 75 ಫೋರ್‌ಗಳು – ₹10 ಲಕ್ಷ
ಫ್ಯಾಂಟಸಿ ಪ್ಲೇಯರ್ ಆಫ್ ದಿ ಸೀಸನ್
ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – ₹10 ಲಕ್ಷ
ಗ್ರೀನ್ ಡಾಟ್ ಬಾಲ್ ಪ್ರಶಸ್ತಿ
ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್) – 172 ಡಾಟ್ ಬಾಲ್‌ಗಳು – ₹10 ಲಕ್ಷ
ಕ್ಯಾಚ್ ಆಫ್ ದಿ ಸೀಸನ್
ಮನೀಶ್ ಪಾಂಡೆ – ₹10 ಲಕ್ಷ
ಫೈನಲ್ ಪಂದ್ಯಶ್ರೇಷ್ಠ (Player of the Match)
ವಿರಾಟ್ ಕೊಹ್ಲಿ – 75 ರನ್ – ₹5 ಲಕ್ಷ
ಇತರೆ ವಿಶೇಷ ಪ್ರಶಸ್ತಿಗಳು
ಅತ್ಯುತ್ತಮ ಮೈದಾನ (5ಕ್ಕಿಂತ ಹೆಚ್ಚು ಪಂದ್ಯಗಳು)
ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ – ₹50 ಲಕ್ಷ
ಅತ್ಯುತ್ತಮ ಮೈದಾನ (4 ಅಥವಾ ಕಡಿಮೆ ಪಂದ್ಯಗಳು)
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ – ₹25 ಲಕ್ಷ
ದಾಖಲೆಗಳ ಸೀಸನ್‌ಗೆ ತೆರೆ
ಟೀಮ್ ಸಾಧನೆಗಳ ಜೊತೆಗೆ ಯುವ ಆಟಗಾರರ ಮಿಂಚಿನ ಪ್ರದರ್ಶನದಿಂದ IPL 2026 ವಿಶೇಷವಾಗಿದ್ದು, ಭವಿಷ್ಯದ ತಾರೆಗಳ ಉದಯಕ್ಕೂ ಈ ಆವೃತ್ತಿ ಸಾಕ್ಷಿಯಾಗಿದೆ.



