October 10, 2026
Saturday, October 10, 2026
spot_img

CINE | ʼನಾನು ತಂದೆಯಾದೆʼ ಖುಷಿಯಿಂದ ಪೋಸ್ಟ್‌ ಹಂಚಿಕೊಂಡ ಡಾಲಿ ಧನಂಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗಷ್ಟೇ ಡಾಲಿ ಧನಂಜಯ್‌ ಹಾಗೂ ಡಾ. ಧನ್ಯತಾ ಪ್ರೆಗ್ನೆನ್ಸಿ ಫೋಟೊಶೂಟ್‌ನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಡಾಲಿ ತಂದೆಯಾಗ್ತಿದ್ದಾರೆ ಎಂದು ಖುಷಿ ಪಟ್ಟಿದ್ದರು. ಇದೀಗ ಬೆಳಗ್ಗೆಯೇ ಗುಡ್‌ನ್ಯೂಸ್‌ ಸಿಕ್ಕಿದ್ದು, ನಾನು ತಂದೆಯಾದೆ, ನಮ್ಮ ಮನೆಗೆ ಮಗ ಬಂದ ಎಂದು ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಕೈ ಫೋಟೊ ತೆಗೆದು ಅಪ್‌ಲೋಡ್‌ ಮಾಡಿದ್ದು, ನಾನು ತಂದೆಯಾದೆ ಎಂದು ಹೇಳಿಕೊಂಡಿದ್ದಾರೆ. ಇಂದು ಬೆಳಗ್ಗೆ ಮಗು ಜನಿಸಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

ಧನಂಜಯ್‌ ಹಾಗೂ ಡಾಕ್ಟರ್‌ ಧನ್ಯತಾ ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಮದುವೆಯಾದವರು. ಈ ಜೋಡಿಗೆ ಇಡೀ ಸ್ಯಾಂಡಲ್‌ವುಡ್‌ ಕಂಗ್ರಾಟ್ಸ್‌ ಹೇಳಿದ್ದು, ಶೀಘ್ರವೇ ಮಗುವಿನ ಮುಖ ತೋರಿಸಿ ಎಂದು ಡಿಮ್ಯಾಂಡ್‌ ಇಟ್ಟಿದೆ.

Must Read