May 30, 2026
Saturday, May 30, 2026
spot_img

ಡ್ರಗ್ಸ್ ಕೇಸ್ | ಕೈ ಸೇರದ ಸಾಕ್ಷಿ: ಶ್ರದ್ಧಾ-ನೋರಾಗೆ ಬಿಗ್ ರಿಲೀಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ 2022ರ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿಗೆ ನೆಮ್ಮದಿ ಸಿಗುವ ಸಾಧ್ಯತೆ ಕಾಣಿಸಿದೆ. ಪ್ರಕರಣದ ತನಿಖೆಯಲ್ಲಿ ಇವರ ವಿರುದ್ಧ ನೇರ ಸಂಬಂಧ ತೋರಿಸುವ ಯಾವುದೇ ದೃಢ ಸಾಕ್ಷ್ಯ ಲಭ್ಯವಾಗದ ಹಿನ್ನೆಲೆಯಲ್ಲಿ, ಮುಂಬೈ ಪೊಲೀಸರು ಸಿದ್ಧಪಡಿಸುತ್ತಿರುವ ಪೂರಕ ದೋಷಾರೋಪ ಪಟ್ಟಿಯಲ್ಲಿ ಇವರ ಹೆಸರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣವು ಡ್ರಗ್ಸ್ ಪೂರೈಕೆ ಜಾಲದ ವಿರುದ್ಧ ನಡೆದ ಕಾರ್ಯಾಚರಣೆಯಿಂದ ಆರಂಭವಾಗಿತ್ತು. ಬಂಧಿತ ಆರೋಪಿಯೊಬ್ಬ ವಿಚಾರಣೆ ವೇಳೆ ಬಾಲಿವುಡ್‌ನ ಕೆಲವು ಗಣ್ಯರು ಭಾಗವಹಿಸುವ ಪಾರ್ಟಿಗಳಿಗೆ ಮಾದಕ ವಸ್ತು ಪೂರೈಕೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರಿಂದ ತನಿಖೆಯ ದಿಕ್ಕು ಸೆಲೆಬ್ರಿಟಿಗಳತ್ತ ತಿರುಗಿತ್ತು. ಬಳಿಕ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ:

ಆದರೆ ಸುದೀರ್ಘ ತನಿಖೆಯ ಬಳಿಕ ಸೆಲೆಬ್ರಿಟಿಗಳ ಹೆಸರನ್ನು ಪ್ರಕರಣಕ್ಕೆ ಜೋಡಿಸುವಂತೆ ಯಾವುದೇ ನಿಖರ ಪುರಾವೆ ಸಿಕ್ಕಿಲ್ಲ ಎಂದು ತನಿಖಾ ಮೂಲಗಳು ಹೇಳಿವೆ. ಇದರಿಂದ ಶ್ರದ್ಧಾ ಕಪೂರ್, ನೋರಾ ಫತೇಹಿ ಸೇರಿದಂತೆ ಕೆಲ ಪ್ರಮುಖರಿಗೆ ಕ್ಲೀನ್ ಚಿಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಡ್ರಗ್ಸ್ ಪೂರೈಕೆ ಜಾಲದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಮಾತ್ರ ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !