ಇಂದಿನ ಡಿಜಿಟಲ್ ಕಾಲದಲ್ಲಿ ಮೊಬೈಲ್ ಮತ್ತು ಇಯರ್‌ಬಡ್ಸ್ ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದೆ. ಬಸ್‌ನಲ್ಲಿ ಸಂಚರಿಸುವಾಗ, ಬೈಕ್‌ನಲ್ಲಿ ಹೋಗುವಾಗ, ಫೋನ್‌ನಲ್ಲಿ ಮಾತನಾಡುವಾಗ, ಹಾಗೂ ಆಫೀಸ್‌ನಲ್ಲಿ ಕೆಲಸ ಮಾಡುವಾಗಲೂ ಕೂಡ ನಮ್ಮ ಕಿವಿಗಳಲ್ಲಿ ಇಯರ್‌ಬಡ್ಸ್ ಇರಬೇಕು ಎನ್ನುವಷ್ಟು ಅದಕ್ಕೆ ನಾವು ಅವಲಂಬಿತರಾಗಿದ್ದೇವೆ. ಒಮ್ಮೆ ಅವುಗಳನ್ನು ಕಿವಿಯಲ್ಲಿ ಹಾಕಿಕೊಂಡರೆ, ನಮ್ಮ ಸುತ್ತಲೂ ಏನು ನಡೆಯುತ್ತಿದೆ ಅನ್ನೋದು ಗಮನಕ್ಕೆ ಬರುವುದಿಲ್ಲ. ಇದು ಎಷ್ಟು ಸರಿ, ಇದರಿಂದಾಗುವ ಅನಾಹುತಗಳೇನು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.
ಇಯರ್‌ಬಡ್ಸ್‌ನ ಅತಿಯಾದ ಬಳಕೆಯಿಂದ ಬೈಕ್‌ಗಳಲ್ಲಿ ವೇಗವಾಗಿ ಚಲಿಸುವಾಗ ಪಕ್ಕದಲ್ಲಿ ಬರುವ ವಾಹನಗಳ ಶಬ್ಧವನ್ನು ಕೇಳುವುದಿಲ್ಲ. ಇದರಿಂದ ಕೆಲವು ಸಂದರ್ಭಗಳಲ್ಲಿ ಅಪಘಾತ ಸಂಭವಿಸಿ ಜೀವ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಹೆಡ್‌ಫೋನ್‌ಗಳು ಮತ್ತು ಇಯರ್‌ಬಡ್ಸ್‌ಗಳ್ಲಿ ಹೆಚ್ಚಿನ ಸೌಂಡ್ ಇರಿಸಿಕೊಂಡು ಹಾಡುಗಳನ್ನು ಕೇಳುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಶ್ರವಣ ದೋಷ ಉಂಟಾಗಬಹುದು.
ಇಯರ್‌ಫೋನ್‌ಗಳನ್ನು ಆಗಾಗ್ಗೆ ಧರಿಸುವುದರಿಂದ ಕಿವಿಯೊಳಗೆ ತೇವಾಂಶ ಸಂಗ್ರಹವಾಗಿ, ಬ್ಯಾಕ್ಟೀರಿಯಾಗಳು ರೂಪುಗೊಳ್ಳುತ್ತವೆ. ಇದರಿಂದ ಸೋಂಕು ಮತ್ತು ಊತ ಉಂಟಾಗುವ ಅಪಾಯವಿದ್ದು, ಇದರಿಂದ ಶಾಶ್ವತವಾಗಿ ಕಿವುಡುತನ ಬರಬಹುದು.
85 ಡೆಸಿಬಲ್‌ಗಳಿಗಿಂತ ಹೆಚ್ಚಿನ ಸೌಂಡ್ ಅನ್ನು ಕೇಳುವುದರಿಂದ ಶಾಶ್ವತ ಶ್ರವಣ ಸಮಸ್ಯೆಗಳು ಉಂಟಾಗಬಹುದು.
ಇಯರ್‌ಬಡ್ಸ್‌ಗಳನ್ನು ಹೆಚ್ಚು ಬಳಸಿದರೆ, ವಿದ್ಯುತ್ಕಾಂತೀಯ ಅಲೆಗಳಿಂದ ಕಿವಿಯಲ್ಲಿನ ನರಗಳು ದುರ್ಬಲಗೊಳ್ಳುವ ಅಪಾಯವಿದೆ. ಶ್ರವಣ ಸಮಸ್ಯೆಗಳು ಕ್ರಮೇಣ ಉಂಟಾಗಿ ಅದು ಮೆದುಳಿನ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ.



