October 1, 2026
Thursday, October 1, 2026
spot_img

ಫಿಟ್ & ಫುಡ್ 01| ಗಡಿಬಿಡಿಯ ಬೆಳಗಿನ ತಿಂಡಿಗೆ ‘ಇನ್‌ಸ್ಟೆಂಟ್ ಜೋಳದ ದೋಸೆಯೇ’ ಬೆಸ್ಟ್!

ಬೆಳಗಿನ ಉಪಾಹಾರಕ್ಕೊಂದು ಹೆಲ್ದಿ ಟ್ವಿಸ್ಟ್. ನಿಮಿಷದಲ್ಲೇ ರೆಡಿಯಾಗುತ್ತೆ ರುಚಿಕರ ಇನ್‌ಸ್ಟಂಟ್ ಜೋಳದ ಹಿಟ್ಟಿನ ದೋಸೆ!

ಬನ್ನಿ ಏನೇನ್ ಬೇಕು ನೋಡಣ;

ಜೋಳದ ಹಿಟ್ಟು
ರವೆ
ಮೊಸರು
ಈರುಳ್ಳಿ
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಜೀರಿಗೆ
ಉಪ್ಪು
ಎಣ್ಣೆ

ಇವಾಗ ರೆಡಿ ಮಾಡೋದು ಹೇಗೆ ನೋಡ್ಕೊಳ್ಳಿ

ಒಂದು ಪಾತ್ರೆಯಲ್ಲಿ ಒಂದು ಕಪ್ ಜೋಳದ ಹಿಟ್ಟು, ಕಾಲು ಕಪ್ ರವೆ, ಸ್ವಲ್ಪ ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಸೇರಿಸಿ ಮಜ್ಜಿಗೆಯಂತೆ ತೆಳುವಾಗಿ ಕಲಸಿಕೊಳ್ಳಿ 5 ನಿಮಿಷ ಪಕ್ಕಕ್ಕೆ ಇಡಿ.

ಈಗ ಕಾದ ಹೆಂಚಿನ ಮೇಲೆ ಈ ಹಿಟ್ಟನ್ನು ನೀರ್ ದೋಸೆಯಂತೆ ಸುತ್ತಲೂ ಹರಡಿ , ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಬೇಯಿಸಿದರೆ ಸಾಕು ಬಿಸಿಬಿಸಿ, ರುಚಿಯಾದ ಇನ್‌ಸ್ಟೆಂಟ್ ಜೋಳದ ದೋಸೆ ಸಿದ್ಧ!

ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಈ ದೋಸೆ ಬೆಸ್ಟ್

ಅಕ್ಕಿ ಬಳಸದೆ ಮಾಡುವ ಈ ದೋಸೆ ಅತ್ಯಂತ ಹಗುರವಾಗಿದ್ದು, ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಜೋಳದಲ್ಲಿ ‘ಗ್ಲೈಸೆಮಿಕ್ ಇಂಡೆಕ್ಸ್’ ಕಡಿಮೆಯಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿ.

ಇದರಲ್ಲಿ ನಾರಿನಂಶ ಹೇರಳವಾಗಿದೆ. ಇದನ್ನು ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಪದೇ ಪದೇ ಹಸಿವಾಗುವುದಿಲ್ಲ. ಗ್ಲುಟನ್ ಅಲರ್ಜಿ ಇರುವವರಿಗೆ ಮತ್ತು ಹೊಟ್ಟೆಯುರಿ ಸಮಸ್ಯೆಯಿಂದ ಬಳಲುವವರಿಗೆ ಜೋಳದ ದೋಸೆ ಬೆಸ್ಟ್.

ದೇಹಕ್ಕೆ ಅಗತ್ಯವಿರುವ ಶಕ್ತಿ, ಪ್ರೋಟೀನ್ ಮತ್ತು ಐರನ್ ಅಂಶಗಳನ್ನು ಇದು ಒದಗಿಸುತ್ತದೆ.

ಆರೋಗ್ಯವನ್ನು ಕಾಪಾಡಿಕೊಳ್ಳುತ್ತಲೇ ನಾಲಗೆಗೆ ರುಚಿಕರವಾದ ತಿಂಡಿ ನೀಡಬೇಕೆಂದರೆ ಇಂದೇ ನಿಮ್ಮ ಮನೆಯಲ್ಲಿ ಈ ‘ಇನ್‌ಸ್ಟೆಂಟ್ ಜೋಳದ ದೋಸೆ’ ಮಾಡಿ ಸವಿಯಿರಿ.

Must Read