September 17, 2026
Thursday, September 17, 2026
spot_img

Health | ಫ್ಯಾಟಿ ಲಿವರ್ ಇದ್ದವರು ಟೀ ಕುಡಿಯಬಹುದಾ? ಸಕ್ಕರೆ ಟೀ ಲಿವರ್‌ಗೆ ಡೇಂಜರಾ?

ಇತ್ತೀಚಿನ ದಿನಗಳಲ್ಲಿ ಬಾಡಿ ಚೆಕಪ್ ಮಾಡಿಸಿದ್ರೆ ಸಾಕು, ಹತ್ತರಲ್ಲಿ ನಾಲ್ಕೈದು ಜನರಿಗೆ ‘ಗ್ರೇಡ್-1 ಫ್ಯಾಟಿ ಲಿವರ್’ ಎಂದು ರಿಪೋರ್ಟ್ ಬರೋದು ಕಾಮನ್ ಆಗ್ಬಿಟ್ಟಿದೆ. ಹೀಗೆ ರಿಪೋರ್ಟ್ ಬಂದ ತಕ್ಷಣ ನಮ್ ಜನರಿಗೆ ಬರೋ ಮೊದಲನೇ ಡೌಟ್ ಅಂದ್ರೆ, “ಅಯ್ಯೋ, ಬೆಳಗ್ಗೆ ಎದ್ದ ತಕ್ಷಣ ಕುಡಿಯೋ ಬಿಸಿ ಬಿಸಿ ಟೀ ಬಿಟಿಬಿಡ್ಬೇಕಾ?” ಎಂದು. ಯಾಕಂದ್ರೆ ನಮ್ಮೂರಲ್ಲಿ ಟೀ ಅಂದ್ರೆ ಬರೀ ಡ್ರಿಂಕ್ ಅಲ್ಲ, ಅದೊಂಥರಾ ಇಮೋಷನ್.

ಮೊದಲನೆಯದಾಗಿ, ಒಂದು ಗುಡ್ ನ್ಯೂಸ್ ಏನಂದ್ರೆ ಫ್ಯಾಟಿ ಲಿವರ್ ಇದ್ದವರು ಟೀ ಕುಡಿಯುವುದನ್ನು ಸಂಪೂರ್ಣವಾಗಿ ಬಂದ್ ಮಾಡ್ಬೇಕಾದ ಅಗತ್ಯವಿಲ್ಲ. ಆದರೆ, ನೀವು ಟೀ ಅನ್ನು ಹೇಗೆ ಕುಡಿತೀರಾ ಅನ್ನೋದರ ಮೇಲೆ ನಿಮ್ಮ ಲಿವರ್ ಹೆಲ್ತ್ ಡಿಪೆಂಡ್ ಆಗಿರುತ್ತೆ.

ಹಾಲು ಮತ್ತು ಸಕ್ಕರೆ ಹಾಕದ ಬ್ಲ್ಯಾಕ್ ಟೀ ಅಥವಾ ಗ್ರೀನ್ ಟೀ ಕುಡಿಯೋ ಅಭ್ಯಾಸ ಮಾಡಿಕೊಂಡರೆ, ಅದು ನಿಮ್ಮ ಲಿವರ್‌ಗೆ ತುಂಬಾ ಒಳ್ಳೆಯದು. ಇದರಲ್ಲಿ ‘ಆಂಟಿಆಕ್ಸಿಡೆಂಟ್ಸ್’ ಪ್ರಮಾಣದಲ್ಲಿರುತ್ತವೆ. ಇವು ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ಕಡಿಮೆ ಮಾಡುವುದಲ್ಲದೆ, ಉರಿಯೂತವನ್ನು ಕಂಟ್ರೋಲ್‌ನಲ್ಲಿಡುತ್ತವೆ.

ನಮ್ಮ ಜನ ದಿನಕ್ಕೆ ಮೂರ್ನಾಲ್ಕು ಬಾರೀ ಚೆನ್ನಾಗಿ ಹಾಲು, ಸಕ್ಕರೆ, ಟೀ ಪೌಡರ್ ಹಾಕಿ ಕುದಿಸಿ ಕುದಿಸಿ ಮಾಡೋ ‘ಮಸಾಲ ಚಾಯ್’ ಕುಡಿತಾರಲ್ಲ… ಮೇನ್ ಪ್ರಾಬ್ಲಮ್ ಇರೋದೇ ಇಲ್ಲಿ.

ಅಪಾಯ ಇರೋದು ಎಲ್ಲಿ ಗೊತ್ತಾ?

ಸಕ್ಕರೆ ಅಂದ್ರೆ ಫ್ಯಾಟಿ ಲಿವರ್‌ಗೆ ಅತಿ ದೊಡ್ಡ ಶತ್ರು. ನೀವು ಟೀಗೆ ಹಾಕೋ ಸಕ್ಕರೆ ನೇರವಾಗಿ ಲಿವರ್‌ಗೆ ಹೋಗಿ ಕೊಬ್ಬಾಗಿ ಬದಲಾಗುತ್ತದೆ.

ಅತಿಯಾದ ಫ್ಯಾಟ್ ಇರೋ ಹಾಲು ಬಳಸಿ ಟೀ ಮಾಡಿದ್ರೆ, ಅದು ಲಿವರ್ ಮೇಲೆ ಇನ್ನಷ್ಟು ಪ್ರೆಶರ್ ಹಾಕುತ್ತೆ.

ಟೀ ಜೊತೆ ಬೇಕರಿ ಬಿಸ್ಕತ್, ರಸ್ಕ್, ತಿನ್ನೋ ಅಭ್ಯಾಸ ಇದ್ರೆ ಫ್ಯಾಟಿ ಲಿವರ್ ಗ್ರೇಡ್-1 ಇರೋದು ಗ್ರೇಡ್-2 ಗೆ ಹೋಗೋದು ಪಕ್ಕಾ.

ಫ್ಯಾಟಿ ಲಿವರ್ ಇದ್ದವರು ಟೀ ಹೇಗೆ ಕುಡಿಯಬೇಕು?

ಟೀನಲ್ಲಿ ಸಕ್ಕರೆ ಹಾಕೋದನ್ನು ಪೂರ್ತಿಯಾಗಿ ನಿಲ್ಲಿಸಿ. ಬದಲಿಗೆ ನಾಚುರಲ್ ಆಗಿ ಶುಂಠಿ, ಏಲಕ್ಕಿ, ತುಳಸಿ ಹಾಕಿ ಕಷಾಯದ ತರ ಕುಡಿಯಿರಿ.

ಹಾಲು ಹಾಕಿ ಕುಡಿಯಲೇಬೇಕು ಅನ್ಸಿದ್ರೆ, ಫ್ಯಾಟ್ ಕಡಿಮೆ ಇರೋ ಹಾಲು ಬಳಸಿ, ಅದೂ ಕೂಡ ತುಂಬಾ ಕಡಿಮೆ ಪ್ರಮಾಣದಲ್ಲಿ.

ದಿನಕ್ಕೆ ಕೇವಲ 1 ಅಥವಾ 2 ಸಣ್ಣ ಕಪ್ ಟೀ ಮಾತ್ರ ಕುಡಿಯಿರಿ. ಅದಕ್ಕಿಂತ ಹೆಚ್ಚು ಕುಡಿಯಬೇಡಿ.

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸ್ಟ್ರಾಂಗ್ ಟೀ ಕುಡಿಯೋ ಬದಲು, ಒಂದು ಲೋಟ ಉಗುರುಬೆಚ್ಚಗಿನ ನೀರು ಕುಡಿದು ಆಮೇಲೆ ಟೀ ಕುಡಿಯೋ ಅಭ್ಯಾಸ ಮಾಡಿ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಗ್ರೇಡ್-1 ಫ್ಯಾಟಿ ಲಿವರ್ ಅನ್ನು ಸರಿಯಾದ ಡಯಟ್, ನಡಿಗೆ ಮತ್ತು ಹೆಲ್ದಿ ಲೈಫ್‌ಸ್ಟೈಲ್‌ನಿಂದ ಸುಲಭವಾಗಿ ರಿವರ್ಸ್ ಮಾಡಬಹುದು. ಸಕ್ಕರೆ ಇಲ್ಲದ, ಹಾಲು ಕಡಿಮೆ ಇರೋ ಹೆಲ್ದಿ ಚಾಯ್ ನಿಮ್ಮ ಲಿವರ್‌ಗೆ ತೊಂದರೆ ಮಾಡಲ್ಲ, ಬಟ್ ಮಿತವಾಗಿರಲಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !