October 6, 2026
Tuesday, October 6, 2026
spot_img

TEA | ಹೂವುಗಳಲ್ಲಿದೆ ಆರೋಗ್ಯದ ರಹಸ್ಯ: ಯಾವ ಕಾಯಿಲೆಗೆ ಯಾವ ಹೂವಿನ ಟೀ ರಾಮಬಾಣ ಗೊತ್ತಾ?

ಪ್ರಕೃತಿಯು ನಮಗೆ ನೀಡಿರುವ ಅದ್ಭುತ ಕೊಡುಗೆಗಳಲ್ಲಿ ಹೂವುಗಳು ಕೂಡ ಒಂದು. ಹೂವುಗಳು ಕೇವಲ ದೇವಸ್ಥಾನದ ಪೂಜೆಗೆ ಅಥವಾ ಮುಡಿಯಲು ಮಾತ್ರವಲ್ಲ, ನಮ್ಮ ಆರೋಗ್ಯವನ್ನು ವೃದ್ಧಿಸುವ ಸಂಜೀವಿನಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ‘ಫ್ಲವರ್ ಟೀ’ ಅಥವಾ ಹೂವಿನ ಚಹಾಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ರಾಸಾಯನಿಕ ಮುಕ್ತವಾಗಿ, ನೈಸರ್ಗಿಕವಾಗಿ ದೇಹದ ತೂಕ ಇಳಿಸಲು, ಒತ್ತಡ ಕಡಿಮೆ ಮಾಡಲು ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಈ ಚಹಾಗಳು ಹೇಗೆ ಸಹಾಯ ಮಾಡುತ್ತವೆ? ಮತ್ತು ಯಾವ ಸಮಸ್ಯೆ ಇರುವವರು ಯಾವ ಹೂವಿನ ಚಹಾವನ್ನು ಆಯ್ದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯೋಣ.

ಯಾವ ಕಾಯಿಲೆಗೆ ಯಾವ ಹೂವಿನ ಟೀ ಒಳ್ಳೆಯದು ಗೊತ್ತಾ?:
ದಾಸವಾಳದ ಟೀ
ದಾಸವಾಳದ ಚಹಾ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಲಿವರ್ ಆರೋಗ್ಯಕ್ಕೆ ಮತ್ತು ತೂಕ ಇಳಿಸಲು ಉತ್ತಮವಾಗಿದೆ.

ಶಾಮೊಮೈಲ್ ಟೀ
ಶಾಮೊಮೈಲ್ ಚಹಾ ಮನಸ್ಸನ್ನು ಪ್ರಶಾಂತಗೊಳಿಸಿ, ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮುಟ್ಟಿನ ಸಮಯದ ಹೊಟ್ಟೆನೋವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.

ಗುಲಾಬಿ ಟೀ
ಗುಲಾಬಿ ಟೀಯಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಶಂಖಪುಷ್ಪ ಟೀ
ಶಂಖಪುಷ್ಪ ಟೀ ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತವೆ ಹಾಗೂ ಕೂದಲು ಉದುರುವುದನ್ನು ಕಡಿಮೆ ಮಾಡುತ್ತವೆ.

ಜಾಸ್ಮಿನ್ / ಮಲ್ಲಿಗೆ ಟೀ
ಜಾಸ್ಮಿನ್ ಟೀ ಸುವಾಸನೆಯು ಮೂಡ್ ಆಫ್ ಆಗಿದ್ದಾಗ ಮನಸ್ಸಿಗೆ ಚೈತನ್ಯ ನೀಡುತ್ತದೆ. ಮೆಟಬಾಲಿಸಂ ಹೆಚ್ಚಿಸಿ ಕ್ಯಾಲೊರಿ ಬರ್ನ್ ಮಾಡಲು ಇದು ಸಹಾಯ ಮಾಡುತ್ತದೆ.

Must Read