June 15, 2026
Monday, June 15, 2026
spot_img

Healthy Habits | ದಿನಾಲೂ ಒಂದು ಚಮಚ ಸೋಂಪು ತಿಂದ್ರೆ ಈ ಕಾಯಿಲೆಗಳೆಲ್ಲಾ ಗಾಯಬ್

ಭಾರತೀಯ ಸಂಪ್ರದಾಯದಲ್ಲಿ ಊಟದ ನಂತರ ಸೋಂಪು ತಿನ್ನುವುದು ಕೇವಲ ಬಾಯಿ ಚೊಕ್ಕಟ ಮಾಡಿಕೊಳ್ಳಲು ಮಾತ್ರವಲ್ಲ, ಅದರಲ್ಲಿ ಅಡಗಿರುವ ಆರೋಗ್ಯದ ರಹಸ್ಯಗಳಿಗಾಗಿ. ನಿತ್ಯವೂ ಊಟದ ಬಳಿಕ ಸೋಂಪು ಸೇವಿಸುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ:

ಅದ್ಭುತ ಜೀರ್ಣಕ್ರಿಯೆ
ಸೋಂಪು ಕಾಳುಗಳಲ್ಲಿ ಆಂಥೋಲ್ ಮತ್ತು ಫೆಂಚೋನ್ ಎಂಬ ತೈಲ ಅಂಶಗಳಿದ್ದು, ಇವು ಹೊಟ್ಟೆಯಲ್ಲಿ ಜೀರ್ಣರಸಗಳನ್ನು ಪ್ರಚೋದಿಸುತ್ತವೆ. ಇದರಿಂದ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

ಗ್ಯಾಸ್ ಮತ್ತು ಆಸಿಡಿಟಿಗೆ ಬ್ರೇಕ್
ನಿಮಗೆ ಆಗಾಗ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಅಥವಾ ಆಸಿಡಿಟಿ ಕಾಡುತ್ತಿದ್ದರೆ, ಊಟದ ನಂತರ ಸ್ವಲ್ಪ ಸೋಂಪು ಅಗಿಯಿರಿ. ಇದು ಹೊಟ್ಟೆಯ ಉರಿಯನ್ನು ತಕ್ಷಣವೇ ಶಮನಗೊಳಿಸುತ್ತದೆ.

ಬಾಯಿಯ ದುರ್ವಾಸನೆ ಮುಕ್ತಿ
ಸೋಂಪು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಕೆಲಸ ಮಾಡುತ್ತದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ, ದುರ್ವಾಸನೆಯನ್ನು ತಡೆದು ಇಡೀ ದಿನ ತಾಜಾತನ ನೀಡುತ್ತದೆ.

ರಕ್ತದೊತ್ತಡ ನಿಯಂತ್ರಣ
ಸೋಂಪಿನಲ್ಲಿ ಪೊಟ್ಯಾಸಿಯಮ್ ಅಂಶ ಸಮೃದ್ಧವಾಗಿದೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !