September 28, 2026
Monday, September 28, 2026
spot_img

ಇರಾನ್‌ ಅಸ್ತು: ಹಾರ್ಮುಜ್ ದಾಟೋಕೆ ರೆಡಿ ಆಯ್ತು ಮತ್ತೆರಡು LPG ಟ್ಯಾಂಕರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ, ಭಾರತೀಯ ಧ್ವಜ ಹೊಂದಿರುವ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ಸಿದ್ಧವಾಗಿವೆ ಎಂದು ವರದಿಯಾಗಿದೆ.

ಈ ಜಲಸಂಧಿ ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿದ್ದು, ವಿಶ್ವದ ದೊಡ್ಡ ಪ್ರಮಾಣದ ಇಂಧನ ಪೂರೈಕೆ ಈ ಜಲಸಂಧಿ ಮೂಲಕ ಸಾಗುತ್ತದೆ.

ಇದನ್ನೂ ಓದಿ:

ಇದಕ್ಕೂ ಮೊದಲು ಇದೇ ಮಾರ್ಗದಲ್ಲಿ ಸಿಲುಕಿದ್ದ ಭಾರತೀಯ ಹಡಗುಗಳು ಸುರಕ್ಷಿತವಾಗಿ ಭಾರತ ತಲುಪಿರುವುದು ಗಮನಾರ್ಹ. ರಾಜತಾಂತ್ರಿಕ ಮಟ್ಟದಲ್ಲಿ ನಡೆದ ಸಂವಹನದ ಪರಿಣಾಮವಾಗಿ ಕೆಲವು ಹಡಗುಗಳಿಗೆ ಸುರಕ್ಷಿತ ದಾರಿ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.

ಇದೀಗ ಶಾರ್ಜಾ ಸಮೀಪ ಲಂಗರು ಹಾಕಿರುವ ‘ಪೈನ್ ಗ್ಯಾಸ್’ ಮತ್ತು ‘ಜಗ್ ವಸಂತ್’ ಎಂಬ ಟ್ಯಾಂಕರ್‌ಗಳು ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿವೆ. ಈ ಹಡಗುಗಳು ಶೀಘ್ರದಲ್ಲೇ ಜಲಸಂಧಿಯನ್ನು ದಾಟುವ ನಿರೀಕ್ಷೆ ಇದೆ. ಇವುಗಳನ್ನು ಪ್ರಮುಖ ತೈಲ ಸಂಸ್ಥೆಗಳು ಚಾರ್ಟರ್ ಮಾಡಿರುವುದಾಗಿ ತಿಳಿದು ಬಂದಿದೆ.

Must Read