May 20, 2026
Wednesday, May 20, 2026
spot_img

ನಮ್ಮ ನಾಗರಿಕರ ಮೇಲೆ ದಾಳಿ ನಡೆದರೆ ಪ್ರತೀಕಾರ ತೀರಿಸಿಕೊಳ್ಳಲು ಹಿಂಜರಿಯುವುದಿಲ್ಲ: ಟ್ರಂಪ್ ಗೆ ಎಚ್ಚರಿಕೆ ನೀಡಿದ ಇರಾನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಕದನ ಮತ್ತಷ್ಟು ಭಯಾನಕ ರೂಪ ಪಡೆದುಕೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ರಾತ್ರಿ ಇಡೀ ನಾಗರಿಕತೆಯೇ ಸರ್ವನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಇರಾನ್, ಯಾವುದೇ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಖಡಕ್ ಉತ್ತರ ನೀಡಿದೆ.

ಈ ಕುರಿತ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌, ಮಧ್ಯಪ್ರಾಚ್ಯದ ಯುದ್ಧಭೂಮಿಯಲ್ಲಿ ಅಮೆರಿಕ ಇಲ್ಲಿವರೆಗೆ ಎಂದೂ ಕಾಣದ ರೀತಿ ಸೋಲನ್ನು ಅನುಭವಿಸಲಿದೆ ವಾಗ್ದಾನ ಮಾಡಿದೆ.

ಅಮೆರಿಕದ ಭಯೋತ್ಪಾದಕ ಸೇನೆಯು ಕೆಂಪು ಗೆರೆ ದಾಟಿದರೆ, ನಮ್ಮ ಪ್ರತಿಕ್ರಿಯೆಯು ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಇರಲಿದೆ. ಇದುವರೆಗೂ ನಾವು ಯಾವುದೇ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿಲ್ಲ. ಆದರೆ ನಮ್ಮ ಜನರ ಸೌಲಭ್ಯಗಳ ಮೇಲಿನ ದಾಳಿ ನಡೆದರೆ, ಪ್ರತೀಕಾರ ತೀರಿಸಿಕೊಳ್ಳಲು ನಾವು ಹಿಂಜರಿಯುವುದಿಲ್ಲ ಎಂದು ಖಡಕ್ ಆಗಿ ತಿಳಿಸಿದೆ.

ಇಲ್ಲಿಯವರೆಗೆ ನಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧದಿಂದ ಇದ್ದೇವೆ. ಆದರೆ ನಮ್ಮ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆದರೆ, ನಾವು ಕೂಡ ಅದನ್ನೇ ಪುನರಾವರ್ತಿಸುತ್ತೇವೆ ಎಂದು ಅಮೆರಿಕದ ಮಿತ್ರ ರಾಷ್ಟಗಳಿಗೂ ಇರಾನ್ ಖಡಕ್ ಸಂದೇಶ ನೀಡಿದೆ.

ಇದೇ ವೇಳೆ ಇರಾನ್, ತಮ್ಮ ಆಪರೇಷನ್ ಟ್ರೂ ಪ್ರಾಮಿಸ್ 4ನ ವೇವ್ 99 ಮುಂದುವರಿಯಲಿದ್ದು ಎಂದು ಶತ್ರುರಾಷ್ಟ್ರಗಳಿಗೆ ಎಚ್ಚರಿಯಿಕೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !