September 28, 2026
Monday, September 28, 2026
spot_img

ಚುನಾವಣಾ ನಕ್ಷೆ ಬದಲಿಸಲು ಹೊರಟಿದೆಯೇ ಕೇಂದ್ರ? ಮೋದಿ ಸರ್ಕಾರಕ್ಕೆ ರಾಹುಲ್ ನೇರ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಇದು ಕೇವಲ ಮಹಿಳಾ ಮೀಸಲಾತಿ ಮಸೂದೆಯಲ್ಲ, ಬದಲಿಗೆ ಭಾರತದ ಚುನಾವಣಾ ನಕ್ಷೆಯನ್ನು ಬದಲಿಸುವ ಹುನ್ನಾರ” ಎಂದು ಅವರು ಗುಡುಗಿದರು.

ಸಬಲೀಕರಣದ ಹೆಸರಿನಲ್ಲಿ ಸರ್ಕಾರ ಮಹಿಳೆಯರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ ಅವರು, “ಸತ್ಯ ಯಾವಾಗಲೂ ಕತ್ತಲಲ್ಲಿರುತ್ತದೆ, ಅದನ್ನು ಹುಡುಕುವ ಧೈರ್ಯ ನಮಗಿರಬೇಕು. ಈ ಮಸೂದೆಯ ಹಿಂದೆ ಅಡಗಿರುವ ಸತ್ಯ ನೋವಿನಿಂದ ಕೂಡಿದೆ,” ಎಂದರು.

ಅಲ್ಲದೆ, ಪ್ರಸ್ತುತ ಮಂಡಿಸಲಾಗಿರುವ ಮಸೂದೆಯಲ್ಲಿನ ಲೋಪದೋಷಗಳನ್ನು ಕೈಬಿಟ್ಟು, ಕೇವಲ ಮಹಿಳಾ ಮೀಸಲಾತಿಗೆ ಮಾತ್ರ ಒತ್ತು ನೀಡಿ ಮಸೂದೆ ಮಂಡಿಸಿದರೆ ಯಾವುದೇ ಷರತ್ತಿಲ್ಲದೆ ಬೆಂಬಲ ನೀಡುವುದಾಗಿ ರಾಹುಲ್ ಗಾಂಧಿ ಇದೇ ವೇಳೆ ಸವಾಲು ಹಾಕಿದರು.

Must Read