October 16, 2026
Friday, October 16, 2026
spot_img

ಲೆಬನಾನ್‌ ಮೇಲೆ ಮುಗಿಬಿದ್ದ ಇಸ್ರೇಲ್: ಹಿಜ್ಬುಲ್ಲಾ ರಾಡ್ವಾನ್ ಫೋರ್ಸ್ ಮೇಲೆ ವೈಮಾನಿಕ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರಿದ್ದು, ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಇಸ್ರೇಲ್ ತನ್ನ ದೃಷ್ಟಿಕೋನವನ್ನು ಲೆಬನಾನ್‌ ನತ್ತ ಹರಿಸಿದ್ದು, ಹಿಜ್ಬುಲ್ಲಾ ಸಂಘಟನೆ ನಿಯಂತ್ರಿತ ದೂರದರ್ಶನ ಪ್ರಸಾರ ಹಾಗೂ ರಾಡ್ವಾನ್ ಫೋರ್ಸ್​ನ ಪ್ರಧಾನ ಕಚೇರಿ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಈ ಕುರಿತು ಇಸ್ರೇಲ್ ಸೇನೆಯ ಹೇಳಿಕೆ ನೀಡಿದ್ದು, ಹಿಜ್ಬುಲ್ಲಾ ನ ಬೃಹತ್ ಪ್ರಸಾರ ಕೇಂದ್ರದ ಮೇಲೆ ದಾಳಿ ನಡೆಸಲಾಗಿದ್ದು, ಈ ಮೂಲಕ ದೊಡ್ಡ ಏಟು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಅದೇ ರೀತಿ ಹಿಜ್ಬುಲ್ಲಾಕ್ಕೆ ಸೇರಿದ ಮಿಲಿಟರಿ ಘಟಕ, ಶಸ್ತ್ರಾಸ್ತ್ರ ಜಾಲಗಳನ್ನು ನಾಶಗೊಳಿಸುತ್ತೇವೆ ಎಂದು ಹೇಳಿದೆ.

ಇದೇ ವೇಳೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತನ್ನ ಸೇನೆಗೆ ಮಹತ್ವದ ಸೂಚನೆ ನೀಡಿದ್ದು, ಲಿಟಾನಿ ನದಿವರೆಗಿನ ಪ್ರದೇಶವನ್ನು ಭದ್ರತಾ ವಲಯ ಎಂದು ಘೋಷಿಸಲು ಆದೇಶಿಸಿದ್ದಾರೆ.ಈ ಮೂಲಕ ಹಿಜ್ಬುಲ್ಲಾ ಬೆದರಿಕೆ ಮುಗಿಯುವವರೆಗೆ ಆ ಪ್ರದೇಶವನ್ನು ಇಸ್ರೇಲ್ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಜಿಸಿದೆ.

ಇತ್ತ ಇಸ್ರೇಲ್‌ನ ದಾಳಿಯನ್ನು ಹಿಜ್ಬುಲ್ಲಾ ತೀವ್ರವಾಗಿ ಖಂಡಿಸಿದ್ದು, ಪ್ರತಿದಾಳಿಯ ಎಚ್ಚರಿಕೆ ನೀಡಿದೆ.

Must Read