October 11, 2026
Sunday, October 11, 2026
spot_img

ಕಾಮಗಾರಿಗಾಗಿ ವರ್ಕ್‌ ಫ್ರಮ್‌ ಹೋಮ್‌ ಕೊಡೋಕೆ ಆಗೋದಿಲ್ಲ : ಜಿಬಿಎ ಮನವಿ ತಿರಸ್ಕರಿಸಿದ ಐಟಿ ಕಂಪನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಔಟರ್‌ ರಿಂಗ್‌ರೋಡ್‌ ಕಾಮಗಾರಿಗಾಗಿ ಐಟಿ ಸಂಸ್ಥೆಗಳಿಗೆ ವರ್ಕ್‌ ಫ್ರಮ್‌ ಹೋಮ್‌ಗಾಗಿ ಜಿಬಿಎ ಮಾಡಿದ್ದ ಮನವಿಯನ್ನು ಅಸೋಸಿಯೇಷನ್‌ ತಿರಸ್ಕಾರ ಮಾಡಿದೆ. ಕಾಮಗಾರಿ ನಡೆಯುತ್ತಿರುವ ಕಾರಣದಿಂದ ವರ್ಕ್‌ ಫ್ರಮ್‌ ಹೋಮ್‌ ಕೊಡೋದಕ್ಕೆ ಆಗೋದಿಲ್ಲ ಎಂದು ಖಡಕ್‌ ಆಗಿ ಹೇಳಿದೆ.

ಇದರಿಂದ ನಿತ್ಯವೂ ಹೈರಾಣಾಗಿ ಆಫೀಸಿಗೆ ಬರುವ ಉದ್ಯೋಗಿಗಳಿಗೆ ನಿರಾಸೆಯಾಗಿದೆ. ಬೆಂಗಳೂರಿನ ಔಟರ್‌ ರಿಂಗ್‌ರೋಡ್‌ನ ವೈಟ್‌ ಟ್ಯಾಪಿಂಗ್‌ ಕಾಮಗಾರಿಗಾಗಿ ಇದೇ ಅಕ್ಟೋಬರ್‌ನಿಂದ ಈ ಭಾಗದ ಕಂಪನಿಗಳಿಗೆ 50:50ರಷ್ಟು ಅನುಪಾತದಲ್ಲಿ ವರ್ಕ್ ಫ್ರಮ್ ಹೋಂಗೆ ಮನವಿ ಮಾಡಿತ್ತು. ಆದರೆ ಜಿಬಿಎ ಮನವಿಯನ್ನು ಕಂಪನಿಗಳು ತಿರಸ್ಕರಿಸಿವೆ.

ಈ ಭಾಗದಲ್ಲಿ ಟ್ರಾಫಿಕ್‌ ದಟ್ಟಣೆ ಸಾಮಾನ್ಯವಾಗಿದೆ. ಇನ್ನು ಕಡಿಮೆ ಮಾಡಲು ಜಿಬಿಎ ಈ ವ್ಯಾಪ್ತಿಯ 20 ಕಿ.ಮೀ ರಸ್ತೆಯನ್ನ ವೈಟ್ ಟ್ಯಾಪಿಂಗ್ ಮಾಡಲು ನಿರ್ಧಾರ ಮಾಡಿದೆ. ಇದೇ ಅಕ್ಟೋಬರ್‌ನಿಂದ ಕೆಲಸ ಆರಂಭ ಮಾಡುವ ಸಿದ್ಧತೆ ಕೂಡ ಮಾಡಿದೆ. ಕಾಮಗಾರಿ ವೇಗಕ್ಕಾಗಿ ಈ ಭಾಗದ ದಟ್ಟಣೆ ನಿವಾರಣೆ ಮಾಡಲು, ಜಿಬಿಎ ಇಲ್ಲಿನ ಕಂಪನಿಗಳಿಗೆ 50% ವರ್ಕ್ ಫ್ರಮ್ ಹೋಂಗೆ ಮನವಿ ಮಾಡಿತ್ತು. ಕಾಮಗಾರಿಯ ಕಾರಣವಿಟ್ಟುಕೊಂಡು ವರ್ಕ್‌ ಫ್ರಮ್‌ ಹೋಮ್‌ ಕೊಡೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ವರ್ಕ್‌ ಫ್ರಮ್‌ ಹೋಮ್‌ಗೆ ಕಂಪನಿಗಳು ಯಾಕೆ ಒಪ್ಪಿಲ್ಲ?

ಜಿಬಿಎ ಅಂದುಕೊಂಡ ಸಮಯಕ್ಕೆ ಕೆಲಸ ಮುಗಿಸಲು ಸಾಧ್ಯವೇ ಇಲ್ಲ. ವರ್ಕ್‌ ಫ್ರಮ್‌ ಹೋಮ್‌ ಇನ್ನಷ್ಟು ದಿನ ನೀಡಬೇಕಾಗುತ್ತದೆ. ಇದು ಕಂಪನಿಯ ಏಳಿಗೆಗೆ ಸೂಕ್ತವಲ್ಲ. ಇನ್ನು ಇದೇ ಮಾರ್ಗದಲ್ಲಿ ಮೆಟ್ರೋ ಕಾಮಗಾರಿಯೂ ನಡೆಯುತ್ತಿದೆ. ಈ ನೆಪ ಹೇಳಿ ಕೆಲಸ ಮುಂದೂಡಿದ್ರೆ ನಮಗೆ ಕಷ್ಟವಾಗುತ್ತದೆ ಎಂದು ಕಂಪನಿಗಳು ಹೇಳಿವೆ.

Must Read