September 15, 2026
Tuesday, September 15, 2026
spot_img

‘It’s okay guys….! ಮತ್ತೆ ಹೀಗೆ ಮಾಡ್ಬೇಡಿ’: ‘49’ ಟ್ರೋಲ್‌ಗೆ ಆಟದಲ್ಲೇ ಕಿವಿ ಹಿಂಡಿದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲ ವಾರಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಒಂದು ಟ್ರೋಲ್ ಇದೀಗ ಮೈದಾನದಲ್ಲೇ ದೊಡ್ಡ ಉತ್ತರ ಕಂಡಿದೆ. ಪಂಜಾಬ್ ಕಿಂಗ್ಸ್ ಮಾಡಿದ್ದ ‘49 ರನ್’ ಪೋಸ್ಟ್‌ಗೆ ಆರ್‌ಸಿಬಿ ಬ್ಯಾಟ್ ಮತ್ತು ಬೌಲಿಂಗ್ ಮೂಲಕವೇ ತಿರುಗೇಟು ನೀಡಿ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಬಳಿಕ ಆರ್‌ಸಿಬಿ ಹಂಚಿಕೊಂಡ ಪೋಸ್ಟ್‌ಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಬೃಹತ್ ಮೊತ್ತ ಕಲೆಹಾಕಿ ಪಂಜಾಬ್‌ಗೆ ಕಠಿಣ ಗುರಿ ನೀಡಿತು. ಗುರಿ ಬೆನ್ನಟ್ಟಿದ ಪಂಜಾಬ್ ಉತ್ತಮ ಹೋರಾಟ ನೀಡಿದರೂ 23 ರನ್‌ಗಳಿಂದ ಸೋಲು ಕಂಡಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಇದನ್ನೂ ಓದಿ:

ವೈರಲ್ ಆದ ಪೋಸ್ಟ್

ಈ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಹಂಚಿಕೊಂಡ ಪೋಸ್ಟ್‌ಗಳು ವೈರಲ್ ಆಗಿವೆ. ಕೆಲ ವಾರಗಳ ಹಿಂದೆ ಪಂಜಾಬ್ ತಂಡ, ಆರ್‌ಸಿಬಿಯ 49 ರನ್ ಆಲೌಟ್ ದಾಖಲೆಯನ್ನು ಟ್ರೋಲ್ ಮಾಡಿತ್ತು. ಇದೀಗ ಅದಕ್ಕೇ ಪ್ರತಿಯಾಗಿ ಆರ್‌ಸಿಬಿ “6 ಓವರ್‌ಗಳಲ್ಲಿ 49 ರನ್ ನೀಡಿ 3 ವಿಕೆಟ್ ಪಡೆದಿದ್ದೇವೆ” ಎಂದು ಪೋಸ್ಟ್ ಮಾಡಿದೆ.

ಇನ್ನೊಂದು ಪೋಸ್ಟ್‌ನಲ್ಲಿ “ಆಗಿದ್ದು ಆಯ್ತು, ಮತ್ತೆ ಹೀಗೆ ಮಾಡ್ಬೇಡಿ” ಎಂದು ಬರೆದು ಪಂಜಾಬ್‌ಗೆ ಖಡಕ್ ಟಾಂಗ್ ನೀಡಿದೆ. ಈ ಪೋಸ್ಟ್‌ಗಳಿಗೆ ಆರ್‌ಸಿಬಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !