October 10, 2026
Saturday, October 10, 2026
spot_img

CINE | ರಶ್ಮಿಕಾ ಜೊತೆ ಹಸೆಮಣೆ ಏರಿದ ಜೆಪಿ ತುಮಿನಾಡ್‌, ಸ್ಯಾಂಡಲ್‌ವುಡ್‌ನಿಂದ ಶುಭಾಶಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸು ಫ್ರಮ್‌ ಸೋ ಸಿನಿಮಾದ ಮೂಲಕ ಮನೆಮಾತಾಗಿರುವ ನಟ, ನಿರ್ದೇಶಕ ಜೆಪಿ ತುಮಿನಾಡ್‌ ರಶ್ಮಿಕಾ ಎನ್ನುವ ಹುಡುಗಿಯ ಜತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಡೀ ಸ್ಯಾಂಡಲ್‌ವುಡ್‌ ತುಮಿನಾಡ್‌ ಮದುವೆಗೆ ಶುಭ ಹಾರೈಸಿದೆ. ಮದುವೆಯಾಗುತ್ತಿರುವ ಹುಡುಗಿಯ ಹೆಸರು ರಶ್ಮಿಕಾ ಅನ್ನೋದನ್ನು ಬಿಟ್ಟರೆ ಅವರ ವೃತ್ತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸು ಫ್ರಮ್‌ ಸೋ ಸಿನಿಮಾ ಮುಗಿಯುವವರೆಗೂ ಮದುವೆಯಾಗೋದು ಬೇಡ ಎಂದು ನಿರ್ಧರಿಸಿದ್ದ ತುಮಿನಾಡ್‌ ಇದೀಗ ಸಿನಿಮಾ ಸಕ್ಸಸ್‌ ನಂತರ ಮದುವೆಯ ನಿರ್ಧಾರ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಮದುವೆಯ ಫೋಟೊಗಳು ವೈರಲ್‌ ಆಗುತ್ತಿದ್ದು, ಎಲ್ಲರೂ ಜೋಡಿಗೆ ಶುಭ ಹಾರೈಸಿದ್ದಾರೆ. ಕುಟುಂಬ, ಆತ್ಮೀಯ ಸ್ನೇಹಿತರಿಗೆ ಮಾತ್ರ ಮದುವೆಗೆ ಎಂಟ್ರಿ ನೀಡಲಾಗಿದೆ.

ಕರಾವಳಿಯ ಪ್ರತಿಭೆಯಾದ ತುಮಿನಾಡ್‌ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಥಿಯೇಟರ್‌ನಲ್ಲಿ ಪಳಗಿದವರು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ತುಮಿನಾಡ್‌ ಜನರಿಗೆ ಕಾಣಿಸಿದರು. ಸು ಫ್ರಮ್‌ ಸೋ ಮೂಲಕ ಜನರಿಗೆ ಹತ್ತಿರವಾದರು.

Must Read