June 14, 2026
Sunday, June 14, 2026
spot_img

ಬೆಳ್ಳಂದೂರಲ್ಲಿ ಪ್ರೀತಿಗೆ ಸಿಕ್ಕಿತು ಸಾ*ವಿನ ರೂಪ: ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂ*ದ ಪಾಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರೇಯಸಿಯು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಪ್ರಿಯಕರನೇ ಆಕೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರು ನಗರದ ಬೆಳ್ಳಂದೂರಿನಲ್ಲಿ ನಡೆದಿದೆ.

ಸಿಕ್ಕಿಂ ಮೂಲದ ಐ ಪಿ ಹಂಗ್ಮಾ (22) ಕೊಲೆಯಾದ ದುರ್ದೈವಿ. ಹತ್ಯೆ ಮಾಡಿದ ಆರೋಪಿ ಪ್ರಿಯಕರನನ್ನು ಸಿಕ್ಕಿಂ ಮೂಲದ ಫುರ್ಬಾ ಲೇಪ್ಸಾ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆರೋಪಿ ಫುರ್ಬಾ ಲೇಪ್ಸಾ ಮದುವೆಯಾಗುವಂತೆ ಹಂಗ್ಮಾಗೆ ಒತ್ತಾಯಿಸುತ್ತಿದ್ದನು. ಆದರೆ ಯುವತಿ “ಈಗಲೇ ಮದುವೆ ಬೇಡ” ಎಂದು ನಿರಾಕರಿಸಿದ್ದಾಳೆ. ಇದರಿಂದ ತೀವ್ರ ಕೋಪಗೊಂಡ ಫುರ್ಬಾ, ಆಕೆಗೆ ಬೇರೆ ಯಾರದೋ ಜೊತೆ ಸಂಬಂಧ ಇರಬಹುದೆಂದು ಶಂಕಿಸಿದ್ದಾನೆ. ಇದೇ ಜಗಳ ವಿಕೋಪಕ್ಕೆ ತಿರುಗಿ, ಇಂದು ಮುಂಜಾನೆ ಸುಮಾರು 5.30ರ ವೇಳೆಗೆ ಆರೋಪಿ ಫುರ್ಬಾ ಲೇಪ್ಸಾ ಚಾಕುವಿನಿಂದ ಇರಿದು ಹಂಗ್ಮಾಳನ್ನು ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ:

ಘಟನಾ ಸ್ಥಳಕ್ಕೆ ಬೆಳ್ಳಂದೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಕೊಲೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !