September 27, 2026
Sunday, September 27, 2026
spot_img

ಹಾರ್ಮುಜ್ ಜಲಸಂಧಿ ತೆರೆಯಿರಿ, ಇಲ್ಲವಾದ್ರೆ ನರಕ ತೋರಿಸುವೆ: ಮತ್ತೆ ಇರಾನ್ ವಿರುದ್ಧ ಗುಡುಗಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ವಿರುದ್ಧ ಕೆಂಡ ಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು 48 ಗಂಟೆಗಳ ಗಡುವು ವಿಧಿಸಿದ್ದು, ಇದರ ಬೆನ್ನಲ್ಲೇ ಮತ್ತಷ್ಟು ಆಕ್ರೋಶ ಭರಿತವಾಗಿ ಎಚ್ಚರಿಕೆ ನೀಡಿದ್ದಾರೆ.

ಅವಾಚ್ಯ ಶಬ್ದಗಳನ್ನು ಬಳಸಿ ವಾಗ್ದಾಳಿ ನಡೆಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸದಿದ್ದರೆ ಇರಾನ್ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಟ್ರೂತ್ ಸೋಶಿಯಲ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಮಂಗಳವಾರ ಇರಾನ್ ಪಾಲಿಗೆ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಧ್ವಂಸದ ದಿನ. ಇಂತಹ ದಾಳಿಯನ್ನು ಇತಿಹಾಸದಲ್ಲಿ ಯಾರೂ ನೋಡಿರುವುದಿಲ್ಲ. ಕೂಡಲೇ ಆ ಜಲಸಂಧಿಯನ್ನು ಮುಕ್ತಗೊಳಿಸಿ, ಇಲ್ಲದಿದ್ದರೆ ನೀವು ನರಕದಲ್ಲಿ ಬದುಕಬೇಕಾಗುತ್ತದೆ, ಅಲ್ಲಾಹನಿಗೆ ಪ್ರಾರ್ಥಿಸಿ ಎಂದು ಅವರು ಬರೆದುಕೊಂಡಿದ್ದಾರೆ.

ಇತ್ತ ಟ್ರಂಪ್ ಅವರ ಬೆದರಿಕೆಗೆ ಇರಾನ್ ಪ್ರತಿಕ್ರಿಯಿಸಿದ್ದು, ನಮ್ಮ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ, ಅಮೆರಿಕಕ್ಕೂ ನಾವು ನರಕದ ಬಾಗಿಲು ತೆರೆಯುತ್ತೇವೆ ಎಂದು ಇರಾನ್‌ನ ಜಂಟಿ ಮಿಲಿಟರಿ ಕಮಾಂಡ್‌ನ ಜನರಲ್ ಅಲಿ ಅಬ್ದುಲ್ಲಾಹಿ ಅಲಿಯಾಬಾದಿ ಎಚ್ಚರಿಸಿದ್ದಾರೆ.

Must Read