May 26, 2026
Tuesday, May 26, 2026
spot_img

ಆಕಾಶದಲ್ಲಿ ಅಲ್ಲ, ನೆಲದ ಮೇಲೆಯೇ ವಿಮಾನಗಳ ಫೈಟಿಂಗ್: ಪ್ರಯಾಣಿಕರು ಫುಲ್ ಸೇಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದ ಸ್ಪೈಸ್‌ಜೆಟ್ ವಿಮಾನವು, ಅಲ್ಲಿಯೇ ನಿಂತಿದ್ದ ಆಕಾಸ ಏರ್ ಸಂಸ್ಥೆಯ ವಿಮಾನಕ್ಕೆ ಡಿಕ್ಕಿ ಹೊಡೆದಿದೆ.

ದೆಹಲಿಯಿಂದ ಹೈದರಾಬಾದ್‌ಗೆ ಹೊರಡಲು ಸಿದ್ಧವಾಗಿದ್ದ ಆಕಾಸ ಏರ್ ವಿಮಾನ (ಸಂಖ್ಯೆ QP 1406) ನಿಂತಿದ್ದ ಸಂದರ್ಭದಲ್ಲಿ, ಸ್ಪೈಸ್‌ಜೆಟ್ ಬಿ737-700 ವಿಮಾನವು ಅದರ ಹತ್ತಿರ ಬಂದಿದೆ. ಈ ವೇಳೆ ಸ್ಪೈಸ್‌ಜೆಟ್‌ನ ಬಲ ಭಾಗದ ರೆಕ್ಕೆ ಆಕಾಸ ಏರ್ ವಿಮಾನದ ಎಡಭಾಗದ ರೆಕ್ಕೆಗೆ ಬಲವಾಗಿ ತಗುಲಿದೆ.

ಡಿಕ್ಕಿಯ ರಭಸಕ್ಕೆ ಆಕಾಸ ಏರ್ ವಿಮಾನದ ರೆಕ್ಕೆ ಮಾತ್ರವಲ್ಲದೆ, ಅದರ ಸ್ಟೆಬಿಲೈಸರ್ ಕೂಡ ಹಾನಿಗೀಡಾಗಿದೆ.

ಅದೃಷ್ಟವಶಾತ್ ಇದೊಂದು ಸಣ್ಣ ಪ್ರಮಾಣದ ಡಿಕ್ಕಿಯಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಎರಡೂ ವಿಮಾನಯಾನ ಸಂಸ್ಥೆಗಳು ಅಧಿಕೃತವಾಗಿ ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !