August 18, 2026
Tuesday, August 18, 2026
spot_img

SNACKS | ಸಂಜೆ ಚಹಾದ ಜೊತೆ ಸವಿಯಲು ಮಾಡಿ ಗರಿಗರಿಯಾದ ‘ಅಕ್ಕಿ ಹಿಟ್ಟಿನ ಚಕ್ಕುಲಿ’!

ಗರಿಗರಿಯಾದ ಮತ್ತು ರುಚಿಕರವಾದ ಅಕ್ಕಿ ಹಿಟ್ಟಿನ ಚಕ್ಕುಲಿ ಮಾಡಲು ಸುಲಭವಾದ ರೆಸಿಪಿ ಇಲ್ಲಿದೆ. ಹಬ್ಬದ ದಿನಗಳಲ್ಲಿ ಅಥವಾ ಸಂಜೆಯ ಚಹಾ ಜೊತೆ ಸವಿಯಲು ಇದು ಅತ್ಯುತ್ತಮ ಕುರುಕಲು ತಿಂಡಿಯಾಗಿದೆ.
ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹಿಟ್ಟು
ಕಡ್ಲೆ ಹಿಟ್ಟು
ಹುರಿಗಡಲೆ ಪುಡಿ
ಅಚ್ಚ ಖಾರದ ಪುಡಿ
ಓಂಕಾಳು
ಜೀರಿಗೆ
ಅರಿಶಿಣ
ಉಪ್ಪು
ಎಣ್ಣೆ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಹುರಿಗಡಲೆ ಪುಡಿ, ಖಾರದ ಪುಡಿ, ಜೀರಿಗೆ, ಓಂಕಾಳು, ಉಪ್ಪು ಮತ್ತು ಸ್ವಲ್ಪ ಬಿಸಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದಷ್ಟು ನೀರನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಈ ಹಿಟ್ಟಿನಿಂದ ಉಂಡೆಗಳನ್ನು ಮಾಡಿ, ಚಕ್ಕುಲಿ ಅಚ್ಚಿನಲ್ಲಿ ಚಕ್ಕುಲಿ ಒತ್ತಿ. ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿದರೆ ಗರಿಗರಿಯಾದ ಅಕ್ಕಿ ಹಿಟ್ಟಿನ ಚಕ್ಕುಲಿ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !