July 25, 2026
Saturday, July 25, 2026
spot_img

ಬೈಕ್ ಕಳ್ಳರಿಗೆ ಸದಲಗಾ ಪೊಲೀಸರ ಬಲೆ: ಇಬ್ಬರ ಬಂಧನ, ಐದು ದ್ವಿಚಕ್ರ ವಾಹನ ಜಪ್ತಿ

ಹೊಸದಿಗಂತ ವರದಿ ಬೆಳಗಾವಿ:

ಅಂತಾರಾಜ್ಯ ಮಟ್ಟದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸದಲಗಾ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 2 ಲಕ್ಷ ಮೌಲ್ಯದ ಐದು ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದಲಗಾ ಪೊಲೀಸ್ ಠಾಣೆಯ ಸಿಎಚ್ಸಿ-1189 ಯು. ಎಮ್. ಕಾಂಬಳೆ ಅವರು ನೀಡಿದ ದೂರಿನ ಮೇರೆಗೆ, ಅಪರಾಧ ಸಂಖ್ಯೆ 184/2026 ಅಡಿಯಲ್ಲಿ (ಬಿಎನ್ಎಸ್) ಕಲಂ 303(2) ಹಾಗೂ 317(2)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ಪ್ರಕರಣದ ಭೇದಿಸಲು ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಶುಭಂ ರಾಜು ಮನ್ನೋಳೆ ಶಮನೇವಾಡಿ, ತಾ. ಚಿಕ್ಕೋಡಿ ಹಾಗೂ ಆಕಾಶ್ ಪ್ರಕಾಶ್ ವಡರ್ ಅಳತೆ, ತಾ. ಹಾತಕಣಂಗಲೆ, ಜಿ. ಕೊಲ್ಲಾಪುರ, ಮಹಾರಾಷ್ಟ್ರ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 2 ಲಕ್ಷ ಮೌಲ್ಯದ ಒಟ್ಟು ಐದು ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ:

ಈ ಕಾರ್ಯಾಚರಣೆಯನ್ನು ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ಹಾಗೂ ಚಿಕ್ಕೋಡಿ ವೃತ್ತದ ಸಿಪಿಐ ವಿಶ್ವನಾಥ ಚೌಗುಲೆ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ಪಿಎಸ್ಐ ಶಿವಕುಮಾರ ಬಿರಾದಾರ, ಪ್ರೊಬೇಷನರಿ ಪಿಎಸ್ಐ ಐ. ಕೆ. ಗೌಡನವರ, ವೈ. ಎಸ್. ಕುಳಲಿ, ಸಿಎಚ್ಸಿ ಎಸ್. ಎನ್. ಬಡೋದೆ, ಯು. ಎಮ್. ಕಾಂಬಳೆ, ವಿ. ಕೆ. ಕುಂಬಾರ, ಸಿಪಿಸಿ ವಿ. ಜಿ. ಹಳಬರ ಸೇರಿದಂತೆ ಇತರ ಸಿಬ್ಬಂದಿ ಭಾಗವಹಿಸಿದ್ದರು. ತನಿಖೆಗೆ ಎಎಸ್ಐ ಎಸ್. ಎಲ್. ಬಾಡಕರ, ಸಿಎಚ್ಸಿ ಆರ್. ಎಮ್. ಮುಜಾವರ, ಸಿಪಿಸಿ ಕೆ. ವಿ. ಚೆಳ್ಳಿಕೇರಿ, ಕೆ. ಎಸ್. ಮಧೂರ ಸಹಕರಿಸಿದ್ದು, ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ತಾಂತ್ರಿಕ ನೆರವು ನೀಡಿದರು.

ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವುಗೊಂಡ ವಾಹನಗಳನ್ನು ವಶಪಡಿಸಿಕೊಂಡ ಸದಲಗಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಐಪಿಎಸ್ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !