June 18, 2026
Thursday, June 18, 2026
spot_img

ಹೇಳೋದೊಂದು ಮಾಡೋದು ಇನ್ನೊಂದು: ಕದ್ದುಮುಚ್ಚಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ ಕೊಡ್ತಿದ್ಯಾ ಪಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಪಾಕಿಸ್ತಾನದ ಪಾತ್ರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಒಂದು ಕಡೆ ಶಾಂತಿ ಮಾತುಕತೆಯ ಮಧ್ಯಸ್ಥಿಕೆಯ ಮಾತು ಹೇಳುತ್ತಿದ್ದ ಪಾಕಿಸ್ತಾನ, ಮತ್ತೊಂದೆಡೆ ಇರಾನ್‌ಗೆ ಗುಪ್ತ ಸಹಾಯ ನೀಡಿದೆ ಎಂಬ ಆರೋಪ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕದ ಮಾಧ್ಯಮಗಳ ವರದಿ ಪ್ರಕಾರ, ಇರಾನ್ ತನ್ನ ಕೆಲವು ಮಿಲಿಟರಿ ವಿಮಾನಗಳನ್ನು ಪಾಕಿಸ್ತಾನದ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲಿ ರಹಸ್ಯವಾಗಿ ಇರಿಸಿತ್ತು ಎನ್ನಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ತಾತ್ಕಾಲಿಕ ಕದನ ವಿರಾಮದ ಕೆಲವೇ ದಿನಗಳಲ್ಲಿ ಈ ಸ್ಥಳಾಂತರ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದ ವೈಮಾನಿಕ ದಾಳಿಯಿಂದ ರಕ್ಷಿಸಿಕೊಳ್ಳಲು ಇರಾನ್ ಈ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಈ ಆರೋಪಗಳನ್ನು ಪಾಕಿಸ್ತಾನ ಸರ್ಕಾರ ಸಂಪೂರ್ಣ ತಳ್ಳಿ ಹಾಕಿದೆ. ಶಾಂತಿ ಮಾತುಕತೆಗೆ ಸಂಬಂಧಿಸಿದ ರಾಜತಾಂತ್ರಿಕ ನಿಯೋಗದ ವಿಮಾನಗಳೇ ಬಂದಿದ್ದವು, ಮಿಲಿಟರಿ ಉದ್ದೇಶ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇದೀಗ ಈ ವಿಚಾರಕ್ಕೆ ಅಮೆರಿಕದ ರಾಜಕೀಯ ವಲಯದಲ್ಲೂ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸೆನೆಟರ್ ಲಿಂಡ್ಸೆ ಗ್ರಹಾಂ ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಟೀಕಿಸಿದ್ದು, ಅಮೆರಿಕ-ಪಾಕ್ ಸಂಬಂಧವನ್ನು ಮರುಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಕಳೆದ ವರ್ಷ ಭಾರತದ ‘ಆಪರೇಷನ್ ಸಿಂಧೂರ’ ದಾಳಿಯ ವೇಳೆ ಇದೇ ವಾಯುನೆಲೆಗೆ ಹಾನಿಯಾಗಿದ್ದ ವಿಚಾರವೂ ಮತ್ತೆ ಚರ್ಚೆಗೆ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !