September 28, 2026
Monday, September 28, 2026
spot_img

ಯುದ್ಧದಲ್ಲಿ ನಲುಗಿರುವ ಇರಾನ್ ಗೆ ಶಾಕ್ ಮೇಲೆ ಶಾಕ್: ಟೆಹ್ರಾನ್ ಪರಿಸರದಲ್ಲಿ 4.3 ತೀವ್ರತೆಯ ಭೂಕಂಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಾಗಲೇ ಯುದ್ಧ, ದಾಳಿಗಳಿಂದ ಕಂಗಾಲಾಗಿರುವ ಇರಾನ್ ಗೆ ಮತ್ತೊಂದು ಶಾಕ್ ಸಿಕ್ಕಿದೆ.

ದಕ್ಷಿಣ ಇರಾನ್‌ನ ಟೆಹ್ರಾನ್ ಬಳಿಯಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಗೆರಾಶ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಭೂಮಿಯಿಂದ ಸುಮಾರು 10 ಕಿಲೋ ಮೀಟರ್ ಆಳದಲ್ಲಿ ಕಂಪನ ಬಿಂದುವನ್ನು ಗುರುತಿಸಲಾಗಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ, ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಕೂಡಾ ಮಂಗಳವಾರ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ, ಸುಮಾತ್ರಾ ಬಳಿಯ ನೀರಿನಲ್ಲಿ ಕಂಪನ ಉಂಟಾಗಿದೆ. ಸಾವುನೋವುಗಳು ಅಥವಾ ಹಾನಿಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭಿಸಿಲ್ಲ ಎಂದಿದೆ.

Must Read