ಎಷ್ಟೋ ಬಾರಿ ತಿರುಪತಿಗೆ ಹೋಗಬೇಕು ಅಂದುಕೊಂಡರೂ ಹೋಗೋದಕ್ಕೆ ಆಗೋದಿಲ್ಲ. ಸಮಯ ಕೂಡಿಬಂದಾಗ, ಗೋವಿಂದ ಕರೆಸಿಕೊಂಡಾಗ ಮಾತ್ರ ತಿರುಮಲಕ್ಕೆ ಭೇಟಿ ನೀಡಲು ಸಾಧ್ಯ ಎನ್ನುವ ಮಾತಿದೆ. ಇದೀಗ ನೀವೇನಾದ್ರೂ ತಿಮ್ಮಪ್ಪನ ದರುಶನಕ್ಕೆ ರೆಡಿಯಾಗಿದ್ರೆ ಇದನ್ನೆಲ್ಲಾ ತಿಳಿದುಕೊಂಡು ಹೋಗಿ..
ಮೂರು ತಿಂಗಳಿಗೊಮ್ಮೆ ಸ್ಪೆಷಲ್ ದರುಶನದ ಟಿಕೆಟ್ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಬುಕ್ಕಿಂಗ್ ಮಾಡಿಕೊಂಡೇ ಹೋಗಿ. ಇದು ಉತ್ತಮವಾಗಿದೆ. ಹಬ್ಬ ಹರಿದಿನಗಳನ್ನು ಅವಾಯ್ಡ್ ಮಾಡುವುದು ಉತ್ತಮ.
ಗಂಡಸರು ಪಂಚೆ ಶರ್ಟ್ ಅಥವಾ ಶಲ್ಯ, ಕುರ್ತಾ ಹಾಗೂ ಪೈಜಾಮ ಹೆಂಗಸರಿಗೆ ಚೂಡಿದಾರ ಅಥವಾ ಸೀರೆ ಕಡ್ಡಾಯವಾಗಿದೆ. ಈ ರೀತಿ ಡ್ರೆಸ್ ಕೋಡ್ ಫಾಲೋ ಮಾಡಿಲ್ಲ ಎಂದಾದರೆ ಒಳಕ್ಕೆ ಎಂಟ್ರಿ ಇರೋದಿಲ್ಲ.
ಮೊಬೈಲ್, ಕ್ಯಾಮೆರಾ, ಲೆದರ್ ಐಟಮ್ಸ್, ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಸ್ ದೇಗುಲದ ಒಳಕ್ಕೆ ಎಂಟ್ರಿ ಇಲ್ಲ.
ಪೂಜೆಗೆ ಮೊದಲು ಪುಷ್ಕರಣಿಯಲ್ಲಿ ಮುಳುಗಿ ನಂತರ ವರಹ ಸ್ವಾಮಿಯ ದೇಗುಲದಲ್ಲಿ ದರುಶನ ಪಡೆದು ನಂತರ ಬಾಲಾಜಿಯನ್ನು ಕಾಣಲು ಹೋಗಿ.
ನಿಮ್ಮ ಜೊತೆ ವೃದ್ಧರು ಅಥವಾ ಒಂದು ವರ್ಷದೊಳಗಿನ ಮಕ್ಕಳು ಇದ್ದರೆ ನಿಮಗಾಗಿ ಬೇರೆ ಫ್ರೀ ದರುಶನದ ಲೈನ್ ಇದೆ ಗಮನಿಸಿ.
ಮಕ್ಕಳನ್ನೂ ಸೇರಿಸಿ ಎಲ್ಲರ ಒರಿಜಿನಲ್ ಆಧಾರ್ ಕಾರ್ಡ್ ಹಾಗೂ ಪ್ರಿಂಟ್ ಆಗಿರುವ ಟಿಕೆಟ್‌ನ್ನು ತೆಗೆದುಕೊಂಡು ಹೋಗಿ.
ಮಾಮೂಲಿ ದರುಶನ ಅಥವಾ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಿ ದರುಶನ ಮಾಡುವವರಿಗೆ ಟೆಂಟ್‌ಗಳಲ್ಲಿ ನೀರು ಹಾಗೂ ಲಘು ಉಪಹಾರದ ವ್ಯವಸ್ಥೆ ಇರುತ್ತದೆ. ಆದರೆ ಇಲ್ಲಿ ಹೆಚ್ಚೆಚ್ಚು ಸಮಯ ಆಗುವ ಕಾರಣ ಸ್ನಾಕ್ಸ್, ಜ್ಯೂಸ್, ಪವರ್ ಬ್ಯಾಂಕ್, ಹ್ಯಾಂಡ್ ಫ್ಯಾನ್ ಇದ್ದರೆ ಒಳಿತು.



