May 15, 2026
Friday, May 15, 2026
spot_img

LIFE HACKS | ಜೀವನದಲ್ಲಿ ಸಂಬಂಧಗಳನ್ನು ಉಳಿಸಿಕೊಳ್ಳೋಕೆ ಈ ಮೂರು ಕೆಲಸ ಮಾಡಿ ಸಾಕು

ನಾನೇನೇ ಮಾಡಿದರೂ ನನ್ನ ಜೊತೆ ಯಾರೂ ಇರೋದಿಲ್ಲ. ಸ್ನೇಹಿತರು, ಪ್ರೀತಿಸಿದವರು ಹೀಗೆ ಹಲವರು ಕೈ ಬಿಟ್ಟು ಹೋಗ್ತಾ ಇದ್ದಾರೆ. ಆದರೆ ಪ್ರೀತಿಯನ್ನು ಉಳಿಸಿಕೊಳ್ಳೋಕೆ ನಿಮ್ಮ ಎಫರ್ಟ್‌ ನೀವು ಹಾಕಲೇಬೇಕಿದೆ. ಸಂಬಂಧಗಳನ್ನು ಹಾಳಾಗದೇ ಸದಾ ಕಾಪಾಡಿಕೊಳ್ಳಲು ಈ ಮೂರು ಕೆಲಸಗಳನ್ನು ಮಾಡಿ..

ಕೋಪ ಬಂದಾಗ ಕೆಟ್ಟ ಮಾತುಗಳು ಬಾಯಿಗೆ ಬಂದಾಗ ಆ ಜಾಗ ಬಿಟ್ಟು ಹೊರಟು ಹೋಗಿ. ಕೆಲವರಿಗೆ ಆ ಸಮಸ್ಯೆ ಅಲ್ಲೇ ಮುಗಿದುಬಿಡಬೇಕು. ಹಲವರಿಗೆ ಸಮಯ ಬೇಕು. ಒಳ್ಳೆಯದ್ದು ಹೇಳೋಕೆ ಆಗದಾಗ ಕೆಟ್ಟದ್ದನ್ನೂ ಹೇಳಬೇಡಿ. ಮೌನತಾಳಿ.

ಪೋಷಣೆ ಮಾಡಿ, ಸಂಬಂಧಗಳಿಗೆ ನೀರೆರೆಯಿರಿ. ಪ್ರೀತಿಸಿದವರು ಸಿಕ್ಕಾಯ್ತು, ಸ್ನೇಹಿತರು ಸಿಕ್ಕಾಯ್ತು ಇನ್ನೇನು ಮಾಡಬೇಕಿಲ್ಲ ಎನ್ನೋದನ್ನು ಮರೆತುಬಿಡಿ. ಎಲ್ಲ ಸಂಬಂಧಗಳಿಗೂ ಪೋಷಣೆ ಹೊಸತನ ಬೇಕು. ಅದಕ್ಕೆ ಪ್ರಯತ್ನ ಮಾಡಿ.

ಅತಿಯಾದ ನಿರೀಕ್ಷೆಗಳಿಂದ ದೂರ ಇರಿ. ಅನಿರೀಕ್ಷಿತವಾಗಿ ಸಿಕ್ಕರೆ ಖುಷಿ ಪಡಿ. ನಿಮ್ಮನ್ನು ನೀವು ಮೊದಲು ಪ್ರೀತಿಸಿ ನಂತರ ನಿಮ್ಮವರನ್ನು ಪ್ರೀತಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !