May 21, 2026
Thursday, May 21, 2026
spot_img

ಪಲ್ಯ, ಗ್ರೇವಿ & More 91 | ಪ್ರೋಟೀನ್ ಭರಿತ ಸಾಂಪ್ರದಾಯಿಕ ಶೇಂಗಾ ಕಾಳಿನ ಪಲ್ಯ ಮಾಡುವ ಸರಳ ವಿಧಾನ

ಶೇಂಗಾ ಪಲ್ಯ ಎನ್ನುವುದು ಉತ್ತರ ಕರ್ನಾಟಕದ ಮನೆಮನೆಗಳಲ್ಲೂ ಅತ್ಯಂತ ಜನಪ್ರಿಯವಾಗಿರುವ ಮತ್ತು ನಾಲಿಗೆಗೆ ರುಚಿ ನೀಡುವ ಒಂದು ವಿಶಿಷ್ಟ ಸಾಂಪ್ರದಾಯಿಕ ಅಡುಗೆಯಾಗಿದೆ. ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಕಡಲೆಕಾಯಿ (ಶೇಂಗಾ) ಕಾಳುಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಮನೆಯಲ್ಲಿ ಯಾವುದೇ ತರಕಾರಿಗಳು ಇಲ್ಲದ ದಿನಗಳಲ್ಲಿ ಅಥವಾ ರೊಟ್ಟಿ-ಚಪಾತಿಗೆ ಒಂದು ಮಸಾಲೆಯುಕ್ತ, ಗಟ್ಟಿಯಾದ ಸೈಡ್ ಡಿಶ್ ಬೇಕೆನಿಸಿದಾಗ ತ್ವರಿತವಾಗಿ ಮಾಡಬಹುದಾದ ಅತ್ಯುತ್ತಮ ರೆಸಿಪಿ ಇದಾಗಿದೆ.

ಬೇಕಾಗುವ ಸಾಮಾಗ್ರಿಗಳು:
ಹಸಿ ಅಥವಾ ನೆನೆಸಿದ ಶೇಂಗಾ
ಈರುಳ್ಳಿ
ಟೊಮೆಟೊ
ಶೇಂಗಾ ಪುಡಿ
ಮೆಣಸಿನಕಾಯಿ ಪುಡಿ
ಬೆಳ್ಳುಳ್ಳಿ – ಶುಂಠಿ ಪೇಸ್ಟ್
ಹುಣಸೆಹಣ್ಣು
ಬೆಲ್ಲದ ಪುಡಿ
ಎಣ್ಣೆ
ಸಾಸಿವೆ
ಜೀರಿಗೆ
ಅರಿಶಿಣ
ಕರಿಬೇವು
ಇಂಗು
ಕೊತ್ತಂಬರಿ ಸೊಪ್ಪು
ಉಪ್ಪು

ಮಾಡುವ ವಿಧಾನ

ಮೊದಲು ಹಸಿ ಶೇಂಗಾ ಕಾಳುಗಳನ್ನು ಕುಕ್ಕರ್‌ನಲ್ಲಿ ಸ್ವಲ್ಪ ಉಪ್ಪು ಮತ್ತು ನೀರು ಸೇರಿಸಿ 2-3 ವಿಸಿಲ್ ಕೂಗಿಸಿ ಮೃದುವಾಗಿ ಬೇಯಿಸಿಕೊಳ್ಳಬೇಕು. ನಂತರ ಬಾಣಲೆಯಲ್ಲಿ 3-4 ಚಮಚ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕರಿಬೇವು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ. ನಂತರ ಒಗ್ಗರಣೆಗೆ ಹೆಚ್ಚಿದ ಈರುಳ್ಳಿ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು. ನಂತರ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಿ. ಬಳಿಕ ಅರಿಶಿಣ, ಮಸಾಲೆ ಖಾರದ ಪುಡಿ, ಹುಣಸೆಹಣ್ಣಿನ ರಸ ಮತ್ತು ಬೆಲ್ಲದ ಪುಡಿ ಸೇರಿಸಿ ಎಣ್ಣೆ ಬಿಡುವವರೆಗೆ ಕೈಯಾಡಿಸಬೇಕು. ನಂತರ ಬೇಯಿಸಿದ ಶೇಂಗಾ ಕಾಳುಗಳನ್ನು ಬಾಣಲೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿಕೊಂಡು. ಗ್ರೇವಿ ಗಟ್ಟಿಯಾಗಲು ಮತ್ತು ಅದ್ಭುತ ರುಚಿ ಬರಲು ಕೊನೆಯಲ್ಲಿ 2 ಚಮಚ ಹುರಿದ ಶೇಂಗಾ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ 3-4 ನಿಮಿಷ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಬೇಕು. ಪಲ್ಯವು ಎಣ್ಣೆ ಬಿಟ್ಟು ದಪ್ಪಗಾದ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಒಲೆಯಿಂದ ಇಳಿಸಿದರೆ ರುಚಿಯಾದ ಶೇಂಗಾ ಪಲ್ಯ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !