October 10, 2026
Saturday, October 10, 2026
spot_img

JAILER | ಜೈಲರ್‌ ಸೆಟ್‌ನಲ್ಲಿ ಭೀಕರ ಅವಘಡ, ಸಿಬ್ಬಂದಿ ಸ್ಥಳದಲ್ಲೇ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿತಂಡಕ್ಕೆ ಸೂತಕ ಆವರಿಸಿದೆ, ಸಿನಿಮಾ ಸ್ಟುಡಿಯೋ ಕೆಲಸದ ವೇಳೆ ಸಿಬ್ಬಂದಿ ಮೃತಪಟ್ಟಿದ್ದಾರೆ.

ಸಿನಿಮಾ ಶೂಟಿಂಗ್‌ಗಾಗಿ ಮನೆಯ ಮಾದರಿಯ ಸೆಟ್‌ ನಿರ್ಮಿಸುವ ವೇಳೆ ವಿದ್ಯುತ್‌ ತಂತಿ ತಾಗಿ ಕಾರ್ತಿಕೇಯನ್‌ ಮೃತಪಟ್ಟಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಕಾರ್ತಿಕೇಯನ್‌ ಕೊನೆಯುಸಿರೆಳೆದಿದ್ದಾರೆ.

ಶಿವರಾಜ್‌ಕುಮಾರ್‌, ರಜನೀಕಾಂತ್‌ ಅಭಿನಯದ ಜೈಲರ್‌ ಸಿನಿಮಾ ಶೂಟಿಂಗ್‌ ಚೆನ್ನೈನ ಪಣಯೂರ್‌ನಲ್ಲಿರು ಖಾಸಗಿ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಈ ಮಧ್ಯೆ ಸಿಬ್ಬಂದಿ ಮೃತಪಟ್ಟಿರುವುದು ಸೆಟ್‌ನಲ್ಲಿ ಶೋಕದ ವಾತಾವರಣಕ್ಕೆ ಕಾರಣವಾಗಿದೆ.

Must Read