ಚಿಕ್ಕ ಮಗುವಿನೊಂದಿಗೆ ಪ್ರವಾಸ ಮಾಡುವುದು ಒಂದು ಸುಂದರ ಅನುಭವ. ಆದರೆ, ಮಗುವಿನೊಂದಿಗೆ ಪ್ರಯಾಣಿಸುವಾಗ ಸಾಮಾನ್ಯ ಪ್ರವಾಸಿ ತಾಣಗಳಿಗಿಂತ ಆರಾಮದಾಯಕ, ಸುರಕ್ಷಿತ ಮತ್ತು ಮೂಲಭೂತ ಸೌಕರ್ಯಗಳು ಸುಲಭವಾಗಿ ಸಿಗುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಅತಿಯಾದ ಅಲೆದಾಟವಿಲ್ಲದೆ, ಶಾಂತಿಯುತವಾಗಿ ಸಮಯ ಕಳೆಯಬಹುದಾದ ಭಾರತದ ಪ್ರಮುಖ ಬೇಬಿ-ಫ್ರೆಂಡ್ಲಿ ಪ್ರವಾಸಿ ತಾಣಗಳ ಪರಿಚಯ ಇಲ್ಲಿದೆ.
ಗೋವಾದ ಬೀಚ್‌ಗಳು ಅತ್ಯಂತ ಶಾಂತವಾಗಿದ್ದು, ಮಗುವಿನೊಂದಿಗೆ ರಜಾದಿನಗಳನ್ನು ಕಳೆಯಲು ಸೂಕ್ತವಾಗಿವೆ. ಇಲ್ಲಿನ ಪ್ರಮುಖ ರೆಸಾರ್ಟ್‌ಗಳು ಮಗುವಿನ ತೊಟ್ಟಿಲು, ಬೇಬಿ ಸಿಟ್ಟಿಂಗ್ ಮತ್ತು ಮಗುವಿನ ಆಹಾರವನ್ನು ಕಸ್ಟಮೈಸ್ ಮಾಡಿಕೊಡುವ ಸೌಲಭ್ಯವನ್ನು ನೀಡುತ್ತವೆ. ನೇರ ವಿಮಾನ ಮತ್ತು ಟ್ಯಾಕ್ಸಿ ಸೌಲಭ್ಯಗಳು ಸುಲಭವಾಗಿ ಲಭ್ಯವಿರುವುದರಿಂದ ಅಲೆದಾಟ ಇರುವುದಿಲ್ಲ.
ಕೂರ್ಗ್‌ಗೆ ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದಾದ ಹತ್ತಿರದ ಗಿರಿಧಾಮ ಇದಾಗಿದೆ. ಹೋಂಸ್ಟೇ ಅಥವಾ ರೆಸಾರ್ಟ್‌ಗಳಲ್ಲಿ ವಿಶಾಲವಾದ ಲಾನ್ ಇರುವುದರಿಂದ ಮಗುವನ್ನು ಸ್ಟ್ರೋಲರ್‌ನಲ್ಲಿ ಆರಾಮವಾಗಿ ಕರೆದೊಯ್ಯಬಹುದು. ಹವಾಮಾನವು ಹಿತವಾಗಿರುವುದರಿಂದ ಮಗುವಿನ ಆರೋಗ್ಯಕ್ಕೆ ಒಗ್ಗುತ್ತದೆ.
ಜೈಪುರ ನಗರವು ರಸ್ತೆ ಮತ್ತು ವಿಮಾನ ಸಂಪರ್ಕವನ್ನು ಹೊಂದಿದ್ದು, ಇಲ್ಲಿನ ಅರಮನೆಗಳು ವಿಶಾಲವಾಗಿದೆ. ಬಹುತೇಕ ಹೋಟೆಲ್‌ಗಳು ಐಷಾರಾಮಿ ಸೌಕರ್ಯಗಳನ್ನು ಹೊಂದಿದ್ದು, ತುರ್ತು ವೈದ್ಯಕೀಯ ಸೇವೆಗಳು ಮತ್ತು ಪ್ರಮುಖ ಆಸ್ಪತ್ರೆಗಳು ನಗರದಲ್ಲಿ ಸುಲಭವಾಗಿ ಸಿಗುತ್ತವೆ.
ಕೇರಳದ ಕುಮರಕೋಮ್, ಮುನ್ನಾರ್‌ನಂತಹ ಗಿರಿಧಾಮಗಳಿಗೆ ಹೋಲಿಸಿದರೆ ಇಲ್ಲಿ ಕಡಿದಾದ ರಸ್ತೆಗಳಿರುವುದಿಲ್ಲ. ಹೀಗಾಗಿ ಮಗುವಿಗೆ ವಾಂತಿ ಅಥವಾ ಪ್ರಯಾಣದ ಆಯಾಸವಾಗುವುದಿಲ್ಲ. ಇಲ್ಲಿನ ಲಕ್ಸುರಿ ಹೌಸ್‌ಬೋಟ್‌ಗಳು ಅಥವಾ ಲೇಕ್ ರೆಸಾರ್ಟ್‌ಗಳಲ್ಲಿ ತಂಗಿ ಇಡೀ ಕುಟುಂಬ ಆರಾಮವಾಗಿ ವಿಶ್ರಾಂತಿ ಪಡೆಯಬಹುದು.
ಮೈಸೂರಿಗೆ ಬೆಂಗಳೂರಿನಿಂದ ಕೇವಲ 2-3 ಗಂಟೆಗಳ ರಸ್ತೆ ಅಥವಾ ರೈಲು ಪ್ರಯಾಣದಲ್ಲಿ ತಲುಪಬಹುದು. ಮೈಸೂರು ಅರಮನೆಯ ಆವರಣ, ಕಾರಂಜಿ ಕೆರೆ ಮತ್ತು ಬೃಂದಾವನ ಗಾರ್ಡನ್‌ನಲ್ಲಿ ಮಗುವಿನೊಂದಿಗೆ ನಿಧಾನವಾಗಿ ಅಡ್ಡಾಡಬಹುದು. ಯಾವುದೇ ಗದ್ದಲವಿಲ್ಲದ ಪ್ರವಾಸಕ್ಕೆ ಇದು ಹೇಳಿಮಾಡಿಸಿದ ಸ್ಥಳವಾಗಿದೆ.



