September 14, 2026
Monday, September 14, 2026
spot_img

ಮಳೆಯ ಅಬ್ಬರಕ್ಕೆ ವಿಭೂತಿ ಜಲಪಾತ ಬಂದ್: ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ

ಹೊಸದಿಗಂತ ವರದಿ ಅಂಕೋಲಾ:

ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ವಿಭೂತಿ ಜಲಪಾತಕ್ಕೆ ಜೂನ್ 8 ರಿಂದ ಪ್ರವಾಸಿಗರಿಗೆ ಸುರಕ್ಷತೆ ದೃಷ್ಟಿಯಿಂದ ತಾತ್ಕಾಲಿಕ ಅವಧಿಯ ನಿರ್ಬಂಧ ಹೇರಲಾಗಿದೆ.

ಹಸಿರು ಕಾನನದ ನಡುವೆ ಭೋರ್ಗರೆಯುವ ಜಲಪಾತ ಪ್ರವಾಸಿಗರನ್ನು ಆಕರ್ಷಿಸಿ ಪ್ರತಿದಿನ ನೂರಾರು ಸಂಖ್ಯೆಯ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬರುತ್ತಿದ್ದರು. ತಾಲೂಕಿನಲ್ಲಿ ಮಳೆ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:

ಮಳೆಗಾಲದಲ್ಲಿ ಜಲಪಾತದಲ್ಲಿ ನೀರು ದುಮುಕುವ ಪ್ರಮಾಣ ಹೆಚ್ಚಲಿದ್ದು ಪ್ರವಾಸಿಗರು ಜಲಪಾತದ ನೀರಿನಲ್ಲಿ ಇಳಿಯುವುದು ಎತ್ತರಕ್ಕೆ ಏರುವುದು ಮೊದಲಾದ ಸಾಹಸಗಳಿಗೆ ಮುಂದಾಗುತ್ತಿರುವುದು ಮಳೆಯ ಸಂದರ್ಭದಲ್ಲಿ ಅಪಾಯಕಾರಿ ಆಗಿ ಪರಿಣಮಿಸುವ ಸಾಧ್ಯತೆ ಇರುವುದರಿಂದ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮಳೆಯ ತೀವ್ರತೆ ಕಡಿಮೆ ಆಗುವ ವರೆಗೆ ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲು ಸ್ಥಳೀಯ ಗ್ರಾಮ ಅರಣ್ಯ ಸಮಿತಿಯ ವತಿಯಿಂದ ನಿರ್ಧರಿಸಲಾಗಿದ್ದು ಈ ದಿಶೆಯಲ್ಲಿ ಸೋಮವಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !