ಹೊಸದಿಗಂತ ವರದಿ ಬೆಳಗಾವಿ:
ಬಿಜೆಪಿ ರಾಜ್ಯಾಕ್ಷ ಬಿವೈ ವಿಜಯೇಂದ್ರ ಅವರು, ಭಾನುವಾರ 21 ರಂದು ಬೆಳಗಾವಿಗೆ ಭೇಟಿಯಾಗಬೇಕಿದ್ದ ವೇಳೆ ಅನಿವಾರ್ಯ ಕಾರಣಗಳಿಂದ ರದ್ದುಪಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ವಿವಿಧ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕೆಂದು ಒತ್ತಾಯಿಸಿ 20ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಕಳೆದ ಮೂರು ತಿಂಗಳಿಂದ ನಿರಂತರ ಹೋರಾಟ ಮಾಡುತ್ತಲೇ ಬಂದಿವೆ. ಇಲ್ಲಿನ ಮಹಾಪೌರರು ಉಪಮಹಾಪೌರರು ಗೊತ್ತುವಳಿಯನ್ನು ಅಂಗೀಕರಿಸಲು ನಿರಾಕರಿಸುತ್ತಿರುವುದು ವಿಷಾದನೀಯ ಎಂದು ಆಕ್ರೋಶ್ ಹೋರ ಹಾಕಿದರು.
ಕಳೆದ ಮೇನಲ್ಲಿ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಜೂನ್ 10ರವರೆಗೆ ಕಾಲಾವಕಾಶ ನೀಡುವಂತೆ ವಿಜಯೇಂದ್ರ ಅವರು ಕಾಲಾವಕಾಶ ನೀಡಿದರು, ಆದರೆ ನಿಗದಿತ ಅವಧಿ ಮುಗಿದು 10 ದಿನಗಳಾದರೂ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರವಾಗಿಲ್ಲ ಎಂದು ಬಿಜೆಪಿ ಹಾಗೂ ಪಾಲಿಕೆಯ ವಿರುದ್ದ ಕನ್ನಡಪರ ಸಂಘಟನೆಗಳು ಅಸಮಾಧಾನ ಹೋರ ಹಾಕಿವೆ.
ಇದನ್ನೂ ಓದಿ:
ವಿಜಯೇಂದ್ರ ಅವರು ಬೆಳಗಾವಿ ಭೇಟಿಗೆ ಆಗಮಿಸಬೇಕಾಗಿರುವ ಎರಡು ಬಾರಿ ಪ್ರವಾಸವನ್ನು ರದ್ದು ಮಾಡಿದ್ದಾರೆ. ಈ ನಡೆಯಿಂದ ಬಿಜೆಪಿಯ ಮೇಲೆ ಇಟ್ಟಿರುವ ನಂಬಿಕೆ ಭರವಸೆಗಳು ಹುಷಿಯಾಗುತ್ತೇವೆ ಎಂದು ಆರೋಪಿಸಿದರು.
ಕಾಂಗ್ರೆಸ್ ರಾಜ್ಯ ಸರ್ಕಾರವಾಗಲಿ ಬಿಜೆಪಿಯಾಗಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರ ಗೋಳಿಸುವುದಕ್ಕೆ ಸಾಥ್ ನೀಡಿದರು ನೀಡದಿದ್ದರು ನಮ್ಮ ಹೋರಾಟಗಳು ನಿರಂತರವಾಗಿರುತ್ತವೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡುವ ಮೂಲಕ ಕರ್ನಾಟಕದ ಪರ ಗೊತ್ತುವಳಿ ಅಂಗೀಕಾರ ಮಾಡುತ್ತವೆ ಎಂದು ಶಪಥ ಮಾಡಿವೆ.



