October 10, 2026
Saturday, October 10, 2026
spot_img

ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಸಿಗಲಿದೆಯೇ ಮುಕ್ತಿ? ಟ್ರಂಪ್ ಹೇಳಿದ ಶುಭ ಸುದ್ದಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರಿದ್ದು, ಇದರ ನಡುವೆ ಇರಾನ್ ಹಾಗೂ ಅಮೆರಿಕ ನಡುವೆ ಮತ್ತೊಂದು ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ.

ಈ ಕುರಿತು ಮಾತನಾಡಿದ ಡೊನಾಲ್ಡ್​ ಟ್ರಂಪ್​​ ಅವರು, ಈ ಬಾರಿ ಶಾಂತಿ ಮಾತುಕತೆ ನಡೆಯುವ ಲಕ್ಷಣಗಳು ಗೋಚರಿಸುತ್ತಿದೆ. ಶುಕ್ರವಾರದೊಳಗೆ ಶುಭ ಸುದ್ದಿಯು ಬರಬಹುದು ಎಂದು ಮುನ್ಸೂಚನೆ ನೀಡಿದ್ದಾರೆ.

ಅಮೆರಿಕವು ಮಾತುಕತೆಗಾಗಿ ಇರಾನ್ ವಿರುದ್ದದ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಆದರೆ ಇದು ಶಾಶ್ವತವಲ್ಲ ಎಂದ ಟ್ರಂಪ್, ಇರಾನ್ ನಿಂದ ಏಕೀಕೃತ ಪ್ರಸ್ತಾವನೆಗಾಗಿ ನಾವು ಕಾಯುತ್ತಿದ್ದೇವೆ. ಅದರ ಆಧಾರದಲ್ಲಿ ಮುಂದಿನ ಮಾತುಕತೆ ನಡೆಯಲಿದೆ ಎಂದು ಹೇಳಿದ್ದಾರೆ.

Must Read