February 25, 2026
Wednesday, February 25, 2026
spot_img

DAILY MOTIVATION | ಒಬ್ಬರೇ ಇರೋಕೆ ಇಷ್ಟವಿಲ್ಲ, ಒಬ್ಬರೇ ತಿನ್ನೋಕೆ ಇಷ್ಟವಿಲ್ಲ, etc etc

ನಂಗೆ ಮನೆಯಲ್ಲಿ ಒಬ್ಬಳೇ ಇರೋಕೆ ಇಷ್ಟವಾಗೋದಿಲ್ಲ, ನಂಗೆ ಒಬ್ಬಳೇ ತಿನ್ನೋಕೆ ಇಷ್ಟವಿಲ್ಲ, ಒಬ್ಬಳೇ ತರಕಾರಿ ತರೋಕೆ ಹೋಗ್ಬೇಕಾ? ಒಬ್ಬಳೇ ಯಾಕೆ ಜಿಮ್‌ಗೆ ಹೋಗ್ಬೇಕು?

ಒಬ್ಬಳೇ ಅಥವಾ ಒಬ್ಬರೇ ಅನ್ನೋದು ಶಾಪ ಅಲ್ಲ ವರ! ಒಂಟಿತನವನ್ನು ಒಮ್ಮೆ ಅರಿತು, ಅದನ್ನು ಇಷ್ಟಪಡೋಕೆ ಶುರು ಮಾಡಿದ ಮೇಲೆ ಕಂಪನಿ ಇದ್ದರೆ ಖುಷಿ, ಇಲ್ಲದಿದ್ದರೂ ಖುಷಿಯೇ.. ಅಲ್ವಾ?

ಒಂಟಿತನ ದೀರ್ಘಕಾಲದ್ದಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಆದರೆ ಸ್ವಲ್ಪ ಸಮಯದ ಒಂಟಿತನ ಬೆಸ್ಟ್‌. ಎಂದಾದರೂ ಮನೆಯಲ್ಲಿ ಒಬ್ಬರೇ ಇದ್ದು ನೋಡಿದೀರಾ? ಮನೆ ತುಂಬಾ ಜನರಿರುವಾಗ ನನಗೆ ಮೀ ಟೈಮ್‌ ಬೇಕು ಎಂದು ಕೂಗಾಡೋ ನಿಮಗೆ ನಿಜವಾಗ್ಲೂ ಮೀ ಟೈಮ್‌ ಬಂದಾಗ, ಅದು ಶಿಕ್ಷೆಯಂತೆ ಕಾಣುತ್ತದೆ. ಅದನ್ನು ಎಂಜಾಯ್‌ ಮಾಡೋದು ಕಲಿಯಬೇಕು.

ಒಬ್ಬರೇ ಇದ್ರೆ ಏನಾಗ್ಬೋದು?
ಮೆಂಟಲ್‌ ರೀಚಾರ್ಜ್‌, ನಿಮ್ಮಿಷ್ಟದ ಹಾಡುಗಳನ್ನು ಜೋರಾಗಿ ಹಾಕಿಕೊಂಡು, ಜೊತೆಗೆ ಹಾಡುತ್ತಾ ನಿಮ್ಮಿಷ್ಟದ ಕೆಲಸ ಮಾಡಿದರೆ ಚಂದ ಅಲ್ವಾ? ಯಾವುದೇ ವಿಷಯದಲ್ಲಿ ಕ್ಲಾರಿಟಿ ಸಿಕ್ಕಿಲ್ಲ ಅಂತಾದರೆ ಒಬ್ಬರೇ ಕೂತು ಯೋಚಿಸಿ. ನಿಮಗಿಂತ ಬೆಸ್ಟ್‌ ನಿರ್ಧಾರ ತೆಗೆದುಕೊಳ್ಳೋರು ಯಾರೂ ಇಲ್ಲ.

ಸಂಬಂಧಗಳಲ್ಲಿ ಒಟ್ಟಾಗಿ ಇರೋದು ಎಷ್ಟು ಮುಖ್ಯವೋ ಹಾಗೇ ದೂರ ಇರೋದು ಕೂಡ ಅಷ್ಟೇ ಮುಖ್ಯ. ಎಲ್ಲರಿಗೂ ತಮ್ಮದೇ ಆದ ಸಮಯ ಬೇಕು. ಆಗಷ್ಟೇ ಸಂಬಂಧಗಳು ಚೆನ್ನಾಗಿರುತ್ತವೆ. ಒಳಗಿನಿಂದ ಮನುಷ್ಯ ಖುಷಿಯಾಗಿದ್ದಾಗ ಮಾತ್ರ ಇನ್ನೊಬ್ಬರಿಗೆ ಖುಷಿ ಹಂಚಬಲ್ಲ.

ನಾನ್ಯಾರು? ನನಗೇನು ಬೇಕು? ನಾನೆಲ್ಲಿಗೆ ಹೋಗ್ತಿದ್ದೇನೆ? ಇನ್ನಿತರ ಪ್ರಶ್ನೆಗಳಿಗೆ ಒಬ್ಬರೇ ಇದ್ದಾಗ ಉತ್ತರ ಸಿಗುತ್ತದೆ.

ಯಾವುದೇ ರೀತಿ ಡಿಸ್ಟ್ರಾಕ್ಷನ್‌ ಇಲ್ಲದೆ, ಅವರಿವರ ನೆಗೆಟಿವ್‌ ಮಾತುಗಳಿಲ್ಲದೆ ಕೆಲಸದ ಮೇಲೆ ಫೋಕಸ್‌ ಮಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !