October 17, 2026
Saturday, October 17, 2026
spot_img

ಕಾರ್ಮಿಕನ ಸೋಗಿನಲ್ಲಿ ಉಗ್ರರ ಸಂಪರ್ಕ? ಹರಿಹರದಲ್ಲಿ ಐಬಿ ಬಲೆಗೆ ಬಿದ್ದ ಶಂಕಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಸಂಸ್ಥೆ (ಐಬಿ) ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಸುಹೈಲ್ ಎಂಬಾತನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಬಣ್ಣದ ಕೆಲಸಗಾರನ ಸೋಗಿನಲ್ಲಿ ನೆಲೆ

ಬಂಧಿತ ಸುಹೈಲ್ ಹಲವು ದಿನಗಳಿಂದ ಬಣ್ಣದ ಕೆಲಸ ಮಾಡುವ ಕಾರ್ಮಿಕನಂತೆ ಗ್ರಾಮದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ತನಿಖಾ ಸಂಸ್ಥೆಗಳ ಪ್ರಕಾರ, ಆತ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಹಿಂದಿನ ಬಂಧನಗಳಿಂದ ಸಿಕ್ಕ ಸುಳಿವು

ಇತ್ತೀಚೆಗೆ ತುಮಕೂರು ಮತ್ತು ದಾವಣಗೆರೆಯಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರು ಶಂಕಿತ ಉಗ್ರರ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದಲ್ಲಿ ಸುಹೈಲ್‌ನ ಸ್ಥಳ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ತುಮಕೂರಿಗೆ ಸ್ಥಳಾಂತರ

ಬಂಧನದ ಬಳಿಕ ಆರೋಪಿಯನ್ನು ಬಿಗಿ ಭದ್ರತೆಯ ನಡುವೆ ತುಮಕೂರಿಗೆ ಕರೆದೊಯ್ಯಲಾಗಿದೆ. ದಾವಣಗೆರೆ ಮತ್ತು ತುಮಕೂರು ಪೊಲೀಸರು ಐಬಿ ಅಧಿಕಾರಿಗಳೊಂದಿಗೆ ಸೇರಿ ತನಿಖೆಯನ್ನು ಮುಂದುವರಿಸಿದ್ದಾರೆ.

ಇನ್ನಷ್ಟು ಮಾಹಿತಿ ಬಹಿರಂಗ ಸಾಧ್ಯತೆ

ಈ ಜಾಲದ ಕುರಿತು ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್.ಟಿ. ಮಾರ್ಗದರ್ಶನದಲ್ಲಿ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ.

Must Read