ಮೈದಾ ಹಿಟ್ಟು
ಈಸ್ಟ್
ಸಕ್ಕರೆ
ಹಾಲು
ಉಪ್ಪು
ಬೆಣ್ಣೆ
ಮೊಟ್ಟೆ
ಹಾಲಿನ ಪುಡಿ
ಅಡುಗೆ ಸೋಡಾ
ಯೆಲ್ಲೋ ಫುಡ್ ಕಲರ್
ಮೊದಲು ಉಗುರುಬೆಚ್ಚಗಿನ ಹಾಲಿಗೆ ಈಸ್ಟ್ ಮತ್ತು ಸಕ್ಕರೆ ಹಾಕಿ 10 ನಿಮಿಷ ಬದಿಗಿಡಿ. ಈಗ ಒಂದು ಪಾತ್ರೆಗೆ ಮೈದಾ, ಉಪ್ಪು, ಈಸ್ಟ್ ಮಿಕ್ಸ್ ಹಾಕಿ ಚೆನ್ನಾಗಿ ನಾದಿ. ಆಮೇಲೆ ಬೆಣ್ಣೆ ಹಾಕಿ ಹಿಟ್ಟು ಚಪಾತಿ ಹಿಟ್ಟಿಗಿಂತ ಸಾಫ್ಟ್ ಆಗೋವರೆಗೆ ನಾದಿ, 1 ಗಂಟೆ ಮುಚ್ಚಿಡಿ.
ಒಂದು ಬೌಲ್ನಲ್ಲಿ ಬೆಣ್ಣೆ ಮತ್ತು ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೈದಾ, ಯೆಲ್ಲೋ ಫುಡ್ ಕಲರ್ ಹಾಕಿ ಪೂರಿ ಹಿಟ್ಟಿನ ತರ ನಾದಿ ಇಟ್ಟುಕೊಳ್ಳಿ. ಉಬ್ಬಿ ಬಂದಿರೋ ಬನ್ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಟಾಪಿಂಗ್ ಹಿಟ್ಟನ್ನೂ ಸಣ್ಣ ಉಂಡೆ ಮಾಡಿ, ಲಟ್ಟಿಸಿ, ಬನ್ ಉಂಡೆಯ ಮೇಲೆ ಕವರ್ ಮಾಡಿ. ಕತ್ತರಿಯಿಂದ ಅಥವಾ ಚಾಕುವಿನಿಂದ ಮೇಲ್ಗಡೆ ಪೈನಂಪಲ್ ತರ ಗೆರೆಗಳನ್ನು ಬಿಡಿಸಿ. ಇದನ್ನು 180°C ನಲ್ಲಿ 15-20 ನಿಮಿಷ ಬೇಕಿಂಗ್ ಓವನ್ನಲ್ಲಿ ಇಡಿ (ಓವನ್ ಇಲ್ಲದಿದ್ರೆ ದಪ್ಪ ತಳದ ಕುಕ್ಕರ್ನಲ್ಲಿ ಉಪ್ಪು ಹಾಕಿ 20-25 ನಿಮಿಷ ಬೇಕ್ ಮಾಡಬಹುದು).
ಈಗ ಬಿಸಿ ಬಿಸಿಯಾದ, ಕ್ರಿಸ್ಪಿ, ಸಾಫ್ಟ್ ಪೈನಂಪಲ್ ಬನ್ ರೆಡಿ! ಸಂಜೆ ಟೀ ಜೊತೆ ಸವಿಯಿರಿ.



