May 26, 2026
Tuesday, May 26, 2026
spot_img

‘ಭರತನಾಟ್ಯವಾ ಅಥವಾ ಫ್ರೀಸ್ಟೈಲ್ ಶೋನಾ?’ ಅನನ್ಯಾ ಪಾಂಡೆ ಡ್ಯಾನ್ಸ್ ನೋಡಿ ನೆಟ್ಟಿಗರ ಕಣ್ಣಲ್ಲಿ ರಕ್ತ ಬಂತಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ.

ಈ ಬಾರಿ ಕಾರಣವಾಗಿರುವುದು ಅವರ ಹೊಸ ಸಿನಿಮಾದಲ್ಲಿನ ಡ್ಯಾನ್ಸ್ ಪ್ರದರ್ಶನ. ಇತ್ತೀಚೆಗೆ ಬಿಡುಗಡೆಯಾದ ಚಾಂದ್ ಮೇರಾ ದಿಲ್ ಸಿನಿಮಾದಲ್ಲಿ ಅನನ್ಯಾ ಮಾಡಿದ ಫ್ಯೂಷನ್ ಡ್ಯಾನ್ಸ್ ನೆಟ್ಟಿಗರ ಟೀಕೆಗೆ ಕಾರಣವಾಗಿದೆ.

ಭರತನಾಟ್ಯ ಫ್ಯೂಷನ್‌ಗೆ ನೆಟ್ಟಿಗರ ಕಿಡಿ

ಸಿನಿಮಾದ ಕಾಲೇಜು ಕಾರ್ಯಕ್ರಮದ ದೃಶ್ಯದಲ್ಲಿ ಅನನ್ಯಾ ಭರತನಾಟ್ಯ ಹಾಗೂ ಹಿಪ್-ಹಾಪ್ ಮಿಶ್ರಣದ ನೃತ್ಯ ಪ್ರದರ್ಶಿಸಿದ್ದಾರೆ. ಆದರೆ ಈ ಪ್ರದರ್ಶನದಲ್ಲಿ ಶಾಸ್ತ್ರೀಯ ನೃತ್ಯದ ಸೊಗಡು ಕಾಣಿಸಲಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಳೆ

ಡ್ಯಾನ್ಸ್ ಕ್ಲಿಪ್ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಕಾಮೆಂಟ್‌ಗಳ ಸುರಿಮಳೆ ಶುರುವಾಗಿದೆ. ಕೆಲವರು “ಭರತನಾಟ್ಯಕ್ಕೆ ಇದು ದೊಡ್ಡ ಶಾಕ್” ಎಂದು ಟೀಕಿಸಿದ್ದಾರೆ. ‘ಭರತನಾಟ್ಯವು ಕ್ರಿಸ್ತಪೂರ್ವ 200 ರಲ್ಲಿ ಹುಟ್ಟಿಕೊಂಡಿತು ಮತ್ತು 2026 ರಲ್ಲಿ ಅನನ್ಯಾ ಪಾಂಡೆ ಅವರಿಂದ ಕೊನೆಗೊಂಡಿತು’ ಎಂದು ನೆಟ್ಟಿಗನೊಬ್ಬ ಪೋಸ್ಟ್ ಹಾಕಿದ್ದರೆ, ಮತ್ತೊಬ್ಬರು ಇದನ್ನು ನೋಡುತ್ತಿದ್ದರೆ ನನ್ನ ಕಣ್ಣುಗಳಿಂದ ರಕ್ತ ಬರುತ್ತಿರುವಂತಿದೆ ಎಂದು ಬರೆದುಕೊಂಡಿದ್ದಾರೆ.

ನೃತ್ಯಪಟುಗಳಿಂದಲೂ ಅಸಮಾಧಾನ

ಖ್ಯಾತ ಭರತನಾಟ್ಯ ಕಲಾವಿದೆ ಅನಿತಾ ರತ್ನಂ ಕೂಡ ಈ ದೃಶ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭರತನಾಟ್ಯದ ಸಂಪ್ರದಾಯ ಮತ್ತು ಭಾವನೆಗಳನ್ನು ಸರಿಯಾಗಿ ತೋರಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !